Breaking News


ಕುಕ್ಕರ್ ಬಾಂಬ್ ಪ್ರಕರಣ : ಸ್ಫೋಟಕ್ಕ ಮಾಹಿತಿ ನೀಡಿದ ಅಲೋಕ್ ಕುಮಾರ್


ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಶಂಕಿತ ಉಗ್ರ ಶಾರೀಕ್​, ಮೈಸೂರಲ್ಲಿ ಹಿಂದು ಯುವಕನೆಂದು ಹೇಳಿಕೊಂಡು ನಕಲಿ ಆಧಾರ್​ ಇಟ್ಟುಕೊಂಡು ಓಡಾಡುತ್ತಿದ್ದ. ಅಷ್ಟೇ ಅಲ್ಲ, ಟೆಕ್ಕಿಯೊಬ್ಬರ ಹೆಸರಲ್ಲಿ ಸಿಮ್​ ಕೂಡ ಪಡೆದಿದ್ದ.

ಫೋನ್​ ತರಬೇತಿಗೂ ನಕಲಿ ದಾಖಲೆ ಕೊಟ್ಟಿದ್ದ… ಇಂತಹ ಆಘಾತಕಾರಿ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಟ್ವಿಟ್ ಮೂಲಕ ಸಾರ್ವಜನಿಕರಿಗೆ ಅಲೋಕ್​ ಕುಮಾರ್​ ಅವರು ನೀಡಿರುವ ಸಲಹೆ ಇಲ್ಲಿದೆ…

– ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ

– ಯುಐಡಿಎಐ ಸೈಟ್‌ನ ದುರುಪಯೋಗ ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯವನ್ನು ಬಳಸಿ

– ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಅವರ ಪೂರ್ವಾಪರಗಳನ್ನು ಪರಿಶೀಲಿಸಿ. ಗುರತಿನ ಚೀಟಿಗಳ ಒಂದು ಪ್ರತಿ ಪಡೆದಿಟ್ಟುಕೊಳ್ಳಿ.

– ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಿ

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *