ಮಂಡ್ಯ : ಪಟ್ಟಣದ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಹಿಳೆ ಅದ್ಯಕ್ಷರ ಸ್ಥಾನ ತೆರವು ಆಗಿದ್ದ ಕಾರಣ ಇಂದು ಚುನಾವಣೆ ನಿಗಧಿಯಾಗಿತ್ತು.ಚುನಾವಣೆ ಶುಭ ರವೀಂದ್ರ ರವರನ್ನು ವರತುಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಶುಭಾ ರವೀಂದ್ರ ರವನ್ನು ಅವಿರೋಧವಾಗಿ ಅದ್ಯಕ್ಷರು ಎಂದು ಘೋಷಿಸಿದರು.ಈ ಸಂದರ್ಭದಲ್ಲಿ ಶುಭಾರವೀಂದ್ರ ರವರ ಬೆಂಬಲಿಗರು ಅದ್ಯಕ್ಷರಾದ ಇನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷ ಮಾಣಿಕನಹಳ್ಳಿ ಕೃಷ್ಣೇಗೌಡ, ಸದಸ್ಯರಾದ ಶೆಟ್ಟಹಳ್ಳಿ ಕೃಷ್ಣೇಗೌಡ, ಸಿದ್ದಾಪುರ ನಾರಾಯಣ್, ಕೃಷ್ಣಾಪುರ ಗಿರೀಶ್, ಕಾರಿಗನಹಳ್ಳಿ ಜಯರಾಮು, ಮತ್ತು ಮಹಿಳಾ ಸದಸ್ಯರುಗಳು ನೂತನ ಅದ್ಯಕ್ಷರಿಗೆ ಶುಭಕೋರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





