Breaking News

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ಬಂಧನ



ಆಂಧ್ರಪ್ರದೇಶ: ಇಲ್ಲಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.

YSRTP ಅವ್ರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆ ನಡೆದಿದ್ದು, ನಂತ್ರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಬಂಧಿಸಿದ್ದಾರೆ.

ವೈಎಸ್ ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಪಾದಾಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಈ ನಿರ್ಧಾರವನ್ನ ಮೊದಲೇ ತೆಗೆದುಕೊಳ್ಳಲಾಗಿದೆ. ನರಸಂಪೇಟೆ ಕ್ಷೇತ್ರದ ಲಿಂಗಗಿರಿ ಬಳಿ ಶರ್ಮಿಳಾ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಚೆನ್ನರಾಯಪೇಟೆ ಮಂಡಲದ ಲಿಂಗಗಿರಿಯಲ್ಲಿ ಊಟದ ವಿರಾಮದ ವೇಳೆ ಕೆಲವರು ಬೆಂಗಾವಲು ಪಡೆಯಲ್ಲಿ ಬಸ್ಗೆ ಬೆಂಕಿ ಹಚ್ಚಿದ್ದಾರೆ. ಶರ್ಮಿಳಾ ಅವ್ರ ಪಾದಯಾತ್ರೆ ವಾಹನಗಳ ಮೇಲೆ ಕಲ್ಲು ತೂರಲಾಗಿದ್ದು, ಹಲವು ಕಾರಿನ ಗಾಜುಗಳು ಧ್ವಂಸಗೊಂಡಿವೆ. ಶರ್ಮಿಳಾ ಗೋ ಬ್ಯಾಕ್ ಎಂದು ಘೋಷಣೆ ಕೂಗಿಲಾಯಿತು. ಪ್ರಜಾ ಪ್ರಸ್ಥಾನಂ ಪಾದಯಾತ್ರೆ ನಿಲ್ಲಿಸಲು ಉದ್ವಿಗ್ನತೆ ಸೃಷ್ಟಿಸಲು ಈ ಬಂಧನ ಮಾಡಲಾಗಿದೆ ಎಂದು ಶರ್ಮಿಳಾ ಆರೋಪಿಸಿದ್ದಾರೆ. ಪಾದಯಾತ್ರೆ ವೇಳೆ ಶಾಂತಿ ಮತ್ತು ಭದ್ರತೆ ಸಮಸ್ಯೆ ಸೃಷ್ಟಿಸಲು ಹಾಗೂ ಯಾತ್ರೆಗೆ ತಡೆಯೊಡ್ಡಲು ಬಸ್ ಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *