ಕೊಳ್ಳೇಗಾಲ(ಚಾ.ನಗರ): ಮದುವೆಗೆ ಒಂದು ದಿನ ಮುನ್ನವೇ (ಜ.29) ವರನಿಗೆ ಚಾಕು ಇರಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಸೇರಿ ಸುಪಾರಿ ನೀಡಿದ್ದ ವಧುವನ್ನು ನಗರ ಪೊಲೀಸರು ಭಾನುವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ತಾಲೂಕಿನ ಕುಣಗಳ್ಳಿಯ ವರ ರವೀಶ್‌ಗೆ ಚಾಕು ಇರಿದಿದ್ದ ಪ್ರಮುಖ ಆರೋಪಿ ಬೆಂಗಳೂರಿನ ದರ್ಶನ್, ಮಿಥುನ್, ಕೊಲೆಗೆ ಸುಫಾರಿ ನೀಡಿದ್ದ ಹೊಸ ಅಣಗಳ್ಳಿಯ ವಧು ನಯನಾ ಅವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಜ.29ರಂದು ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ವರ ಕಾರಿನಲ್ಲಿ ಬರುತ್ತಿದ್ದಾಗ ಸಂಜ ವೇಳೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಈ ಘಟನೆಯಿಂದಾಗಿ ಜ.30ರಂದು ನಡೆಯಬೇಕಿದ್ದ ಮದುವೆ ರದ್ದಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

