Breaking News

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋದ್ರೆ ಏನು ತಪ್ಪು.ಎಚ್ ವಿಶ್ವನಾಥ್

ಹುಬ್ಬಳ್ಳಿ: ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಬೃಹತ್ ಸಮಾವೇಶ ಆ. ೨,೩ ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ್ಯಾಂತ ಕುರುಬ ಸಮಾಜದ ೧೨ ಕೋಟಿ ಜನ ಸಂಖ್ಯೆ ಇದ್ದರೂ ಸಹ ಸಮಾಜದ ರಾಜಕೀಯ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಹಿಂದೆ ಇರುವುದು ದುರದೃಷ್ಟ ಸಂಗತಿಯಾಗಿದೆ ಎಂದರು.

ಸದ್ಯ ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ವತಿಯಿಂದ ಸಮಾಜವನ್ನು ಸಂಘಟನೆಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಹಿನ್ನೆಲೆ ದೇಶದಲ್ಲಿ ಸಮಾಜ ಬಲಿಷ್ಠಗೊಳಿಸುವ ಉದ್ದೇಶದಿಂದ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಆ. ೩ ರಂದು ಸಮಾಜದಿಂದ ಎರಡು ಬಾರಿ ಆಯ್ಕೆಯಾದ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಮೆಚ್ಚಿ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶಕ್ಕೆ‌ ಹರಿಯಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡ, ಆಂಧ್ರಪ್ರದೇಶ ದೇಶದ ವಿವಿಧ ರಾಜ್ಯದ ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಧಾರವಾಡ ಸೇರಿ ಸುಮಾರು ೧ ಲಕ್ಷ ಸಮಾಜದ ಜನರು ಸೇರುವ ನಿರೀಕ್ಷೆ ಇದೆ. ರಾಜ್ಯಾದ್ಯಾಂತ ಸಭೆಗಳ ನಡೆಸಿ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ವಿಧಾನ‌ ಪರಿಷತ್ ಸದಸ್ಯ ಹಾಗೂ ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ವಿಶ್ವನಾಥ ಮಾತನಾಡಿ, ಕುರುಬ ಸಮಾಜದ ಸಂಘಟಿಸುವ ಉದ್ದೇಶದಿಂದ ೨೦೧೪ ರಿಂದ ಮಹತ್ಮಾ ಗಾಂಧಿ‌ ಜಯಂತಿ ದಿನದಂದು ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಆರಂಭಿಸಲಾಗಿದೆ. ಜನತಂತ್ರ ವ್ಯವಸ್ಥೆ ರಾಜಕಾರಣಕ್ಕೆ ಜನಶಕ್ತಿ ಅವಶ್ಯಕತೆ ಇದೆ. ರಾಜಕೀಯವಾಗಿ ಸಮಾಜವು ಬೆಳೆದಾಗ ನಾವು ಬೆಳೆಯಲು ಸಾಧ್ಯ ಎಂದರು.
ಸಮಾಜದ ಮುಖಂಡರಾದ ಲೋಹಿತ್ ನಾಯಕರ, ನಾಗರಾಜ ಗುರಿಕಾರ, ಯೋಗಪ್ಪ ದಾಯಗವಾಡಿ, ಸಿದ್ದ ತೇಜಿ ಇದ್ದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *