ಹುಬ್ಬಳ್ಳಿ: ಸಂಸಾರದ ಗುಟ್ಟು ವ್ಯಾಧಿ ರಟ್ಟು ಎಂಬ ಮಾತು ಕೇಳಿದ್ದೀರಿ. ಆದರೆ ಇಲ್ಲಿ ಮಾತ್ರ ವ್ಯಾಧಿ ರಟ್ಟು ಅಷ್ಟೇ ಅಲ್ಲ ಸೀದಾ ರಾಷ್ಟ್ರಪತಿ ಭವನ ತಲುಪಿದೆ. ಇದು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರೂ, ಪುನಃ ಎರಡನೇ ಮದುವೆಯಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.
ಒಂದು ಕಡೆ ಮೊದಲ ಗಂಡ ಬಿಟ್ಟು ಹೋದ. ಎರಡನೇ ಗಂಡನ ಜೊತೆಗೆ ಜೀವನ ಮಾಡಲು ಆತನ ಮೊದಲನೆ ಹೆಂಡತಿ ಬಿಡುತ್ತಿಲ್ಲ. ಹೀಗಾಗಿ ನನಗೆ ಮಾನಸಿಕ ಹಿಂಸೆಯಾಗುತ್ತಿದೆ ನಾನು ಗರ್ಭಿಣಿ ಆತ್ಮಹತ್ಯೆ ಸಹ ಮಾಡಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ನನಗೆ ದಯಾಮರಣ ಕರುಣಿಸಿ ಅಂತ ರಾಷ್ಟ್ರಪತಿಗಳಿಗೆ ಮಹಿಳೆಯೊಬ್ಬಳು ಪತ್ರ ಬರೆದಿದ್ದಾರೆ.
ಈಗಾಗಲೇ ಮದುವೆಯಾಗಿ ಸುಖ ಸಂಸಾರ ನಡೆಸಿ ಎದೆಮಟ್ಟಕ್ಕೆ ಬೆಳೆದು ನಿಂತ ಮಕ್ಕಳಿದ್ದರೂ, ಅದನ್ನು ಲೆಕ್ಕಿಸಿದೆ ಎರಡನೇ ಮದುವೆಯಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ವಿಚಿತ್ರ ತ್ರಿಕೋನ ಪ್ರೇಮಕಥನ ದೇಶದ ಪ್ರಥಮ ಪ್ರಜೆಯ ಅಂಗಳಕ್ಕೆ ತಲುಪಿದೆ. ಇದಕ್ಕೆ ಹುಬ್ಬಳ್ಳಿಯ ಗಿರಿನಗರ ಸಾಕ್ಷಿಯಾಗಿದೆ. ಗಿರಿನಗರದ ಎಲೆಕ್ನಿಕಲ್ ಗುತ್ತಿಗೆದಾರ ಬಸವರಾಜ ಅವರು ಮೊದಲ ಪತ್ನಿ ರೂಪಶ್ರೀ ಎರಡನೇ ಪತ್ನಿ ರೂಪಮಾಲಾ ಸಂಸಾರದ ಗುಟ್ಟು ಕೇವಲ ಬೀದಿ ರಟ್ಟು ಮಾತ್ರವಾಗದೆ, ದೂರ ದಿಲ್ಲಿಯ ರಾಷ್ಟ್ರಪತಿಗಳ ಅಂಗಳಕ್ಕೂ ಸಹ ಕಾಲಿಟ್ಟಿದೆ. ಎರಡನೇ ಗಂಡನ ಜೊತೆಗೆ ಜೀವನ ನಡೆಸಲು ಅವರ ಮೊದಲ ಪತ್ನಿ ಬಿಡುತ್ತಿಲ್ಲ. ಹೀಗಾಗಿ ನನಗೆ ಮಾನಸಿಕ ಹಿಂಸೆಯಾಗುತ್ತಿದೆ ನಾನು ಗರ್ಭಿಣಿ ಆತ್ಮಹತ್ಯೆ ಸಹ ಮಾಡಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ನನಗೆ ದಯಾಮರಣ ಕರುಣಿಸಿ ಅಂತ ರಾಷ್ಟ್ರಪತಿಗಳಿಗೆ ಪತ್ರ ಬರೆದ ರೂಪಮಾಲಾ ನೇರವಾಗಿ ಪತ್ರ ಬರೆದಿದ್ದಾರೆ.
ಸಂಸಾರದ ಗುಟ್ಟು ವ್ಯಾದಿ ರಟ್ಟು ಎಂಬಂತೆ ಈ ಮೂವರು ಸಂಸಾರದ ಗುಟ್ಟು ಈಗ ರಾಷ್ಟ್ರಪತಿಗಳ ಭವನ ತಲುಪಿದ್ದು, ಇದಕ್ಕೆ ರಾಷ್ಟ್ರಪತಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

