ಹುಬ್ಬಳ್ಳಿ: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಾದ ಗೋಂಧಳಿ, ಬುಡಬುಡಕಿ, ಜೋಶಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಾದೇಶ ನೀಡಲು ಶೀಘ್ರವಾಗಿ ಅನುಮತಿ ನೀಡಬೇಕು ನೀಡದಿದ್ದರೇ ಡಿಸೆಂಬರ್ ೧೯ ರಂದು ಬೆಳಗಾವಿಯಲ್ಲಿ ಧರಣಿ ಕೈಗೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜದ ಸಂಘದ ರಾಜ್ಯಧ್ಯಕ್ಷರಾದ ವಿಠ್ಠಲ ಗಣಚಾರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಗೋಂಧಳಿ, ಬುಡ ಬುಡಕಿ, ಜೋಶಿ ಸಮುದಾಯಗಳಿಗೆ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಲ್ಲಿ ಅಲೆಮಾರಿ ಎಂದು ನಮೂದಿಸುವುದು, ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಒಳಮೀಸಲಾತಿ ಶೇ ೩ರಷ್ಟು ನೀಡುವುದು, ಈ ಸಮುದಾಯಗಳಿಗೆ ಟೆಂಟ್ ಮತ್ತು ಗುಡಿಸಲು ಮುಕ್ತಗೊಳಿಸಬೇಕು, ಅಲೆಮಾರಿ ಜೀವನದಲ್ಲಿ ಇರುವಾಗ ಅಪಘಾತದಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರ ಜೀವನೋಪಾಯಕ್ಕಾಗಿ ರೂ. ೨೦ ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕು, ಸಣ್ಣಪುಟ್ಟ ವ್ಯಾಪಾರಿಗಳಿಗೆ ೩ ಲಕ್ಷ ಸಹಾಯಧನ ನೀಡವುದು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಟೈಲರಿಂಗ್ ಹಾಗೂ ಇತರೆ ಕರಕುಶಲ ಉದ್ಯೋಗಗಳ ಉಚಿತ ತರಬೇತಿಯನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕಿದೆ.
ಈ ಹಿನ್ನಲೆಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ಕಾರ್ಯವು ಕಳೆದ ೪ ವರ್ಷಗಳಿಂದ ವಿಳಂಬವಾಗಿರುವುದರಿಂದ ಸಮಾಜದ ಜನರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದು, ಡಿಸೆಂಬರ್ ೧೯ ರಂದು ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಸುವರ್ಣಸೌಧ ಬೆಳಗಾವ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ನಾಗಭೂಷಣ ಮುಕ್ಕೆ, ಎಂ.ಬಿ. ಶಾಸ್ತ್ರಿ, ನಾಗರಾಜ್ ಗೊಗರೆ, ಸಂತೋಷ ಶಿಂಧೆ, ತುಕಾರಾಮ ಶಿಂಧೆ ಸೇರಿದಂತೆ ಉಪಸ್ಥಿತರಿದ್ದರು,
bigtvnews | Hubli Dharwad News | Kannada News | Karnataka News Hubli News | News In Hubli | Local news

