ಹುಬ್ಬಳ್ಳಿ : ರಾಷ್ಟ್ರಪತಿ ಭವನದಿಂದ ಸೂಚನೆ ನೀಡಿದರು ಅಧಿಕಾರಿಗಳು ಹಣ ಪಾವತಿ ಮಾಡುತಿಲ್ಲ. ನನ್ನ ಜೀವಕ್ಕೆ ಏನಾದರೂ ಆದರೆ ಕಡೂರು, ಮೂಡಗೆರೆ ತಾಲೂಕಿನ ತಾಪಂ, ಗ್ರಾಪಂ ಅಧಿಕಾರಿಗಳೇ ಹೊಣೆ ಎಂದು ಗುತ್ತಿಗೆದಾರ ಬಸವರಾಜ ಅಮರಗೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಈಗ ರಾಷ್ಟ್ರಪತಿಗಳ ಭವನದಿಂದ ಬಿಲ್ ಪಾವತಿ ಮಾಡಲು ಆದೇಶ ಬಂದರೂ ಅಧಿಕಾರಿಗಳು ಹಣ ಪಾವತಿ ಮಾಡುತಿಲ್ಲ . ನಾನು ಈಗಾಗಲೇ ಕೋವೀಡ್ ಸಂದರ್ಭದಲ್ಲಿ ಕಾಮಗಾರಿಗೆ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದೆ. ನಾನು ಮಾಡಿದ ಸಾಮಗ್ರಿಗಳಿಗೆ ಯಾವುದೇ ರೀತಿಯ ಹಣ ಪಾವತಿ ಮಾಡಿರಲಿಲ್ಲ. ಕಚೇರಿಗೆ ಅಲೆದು ಅಲೆದು ಕೊನೆಗೆ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದೆ. ರಾಷ್ಟ್ರಪತಿಗಳ ಭವನದಿಂದ ಹಣ ಪಾವತಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು ಇದುವರೆಗೆ ಹಣ ಪಾವತಿ ಮಾಡಿಲ್ಲ. ಕಡೂರು, ಮೂಡಗೆರೆ ತಾಲೂಕಿನ ಗ್ರಾ. ಪಂಳಿಗೆ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದೆನೆ. ಸರಬರಾಜು ಮಾಡಿ 2 ವರ್ಷ ಗತಿಸಿದರೂ ತಾಪಂ ಇಓ ಬಿಲ್ ಪಾವತಿ ಮಾಡಿರಲಿಲ್ಲ. ಬಿಲ್ ಪಾವತಿಸಲು ಕಮಿಷನ್ ಕೇಳುತ್ತಿರುವುದಾಗಿ ಬಸವರಾಜ್ ಆರೋಪಿಸಿದ್ದರು.
ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಸಹ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈಗ ರಾಷ್ಟ್ರಪತಿ ಭವನದಿಂದ ಸೂಚನೆ ಬಂದರು ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲಾ. ಈಗ ರಾಷ್ಟ್ರಪತಿಗಳ ಭವನದಿಂದ ಸೂಚನೆ ಬಂದರು ಪಾವತಿ ಮಾಡಲು ಮುಂದಾಗುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





