Breaking News

ನವನಗರ, ಸುತಗಟ್ಟಿಯಿಂದ ಚಿಗರಿ ಬಸ್ ಸಂಪರ್ಕ ಸಾರಿಗೆ ಆರಂಭ

ಹುಬ್ಬಳ್ಳಿ : ನವನಗರ ಹಾಗೂ ಸುತಗಟ್ಟಿ ಪ್ರಯಾಣಿಕರ ಅನುಕೂಲಕ್ಕಾಗಿ ಚಿಗರಿ ಬಸ್ ಸಂಪರ್ಕ ಸಾರಿಗೆಯನ್ನು ಆರಂಭಿಸಲಾಗಿದೆ. ನವನಗರದ ಕರ್ನಾಟಕ ಸರ್ಕಲ್ ದಿಂದ RTO ಚಿಗರಿ ಬಸ್ ಸ್ಟೇಶನ್ ವರಗೆ ಈ ಬಸ್ ಸಂಚರಿಸಲಿದೆ. ಈ ಬಸ್ಸಿನಲ್ಲಿ ಪ್ರಯಾಣಿಸುವವರು RTO ಚಿಗರಿ ಬಸ್ ಸ್ಟೇಶನ್ ಧಾರವಾಡ ಕಡೆಗೆ ಅಥವಾ ಹುಬ್ಬಳ್ಳಿ ಕಡೆಗೆ ಪ್ರಯಾಣಿಸಬಹುದಾಗಿದೆ.

ಪ್ರಾಯೋಗಿಕವಾಗಿ ಮಾಸಿಕ ಸ್ಮಾರ್ಟ್ ಕಾರ್ಡ ಪಾಸ್ ಹೊಂದಿದವರು ಈ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈಚೆಗೆ ನವನಗರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರು ಸಂಪರ್ಕ ಸಾರಿಗೆಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಕಾರ್ಪೋರೇಟರುಗಳಾದ ಸುನಿತಾ ಮಾಳ್ವದೇಕರ್, ಚಂದ್ರಶೇಖರ್ ಮನಗುಂಡಿ ಪೂಜೆ ನೆರವೇರಿಸಿದರು. ಪ್ರಯಾಣಿಕರು ಈ ಸೌಲಭ್ಯದ ಪ್ರಯೋಜನ ಪಡೆಯಲು ಕೋರಲಾಗಿದೆ.

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *