ಹುಬ್ಬಳ್ಳಿ: ನಾಟ್ಯಾಂಜಲಿ ಕಲಾ ಮಂದಿರ ಹುಬ್ಬಳ್ಳಿ, ಪ್ರಸ್ತುತ ಪಡಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ನೃತ್ಯಾರ್ಪಣ -೨೦೨೨ ಭರತನಾಟ್ಯ ಕಾರ್ಯಕ್ರಮವನ್ನು ಡಿ. ೨೪ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಟ್ಯ ವಿದೂಷಿ ಹಾಗೂ ಸೌಭಾಗ್ಯ ಮಹಾಲೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣಿ ಅಬ್ಬಕ್ಕ ದೇವಿ ಎಂಬ ನೃತ್ಯ ರೂಪಕ ವಿದ್ವತ್ ಹಾಗೂ ಸೀನಿಯರ್ ದರ್ಜೆಯ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹು-ಧಾ ಮಹಾಪೌರರಾದ ಉಮಾ ಮುಕುಂದ, ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಚ್.ಎಸ್.ಕಿರಣ್, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ, ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಗೋಟಗೋಡಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಗೇಟಿಯವರ್ ಆಗಮಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಮಾರಾವ್, ಆಶಾ ಪ್ರಭು, ಭಾರತಿಭಟ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

