Breaking News

ಅವಳಿ ನಗರದಲ್ಲಿ ಅಕ್ರಮ ಸೈಟ್ ನಿರ್ಮಾಣ ಅಧಿಕಾರಿ ಅಕ್ರಮ ಕೈವಾಡ..?

ಹುಬ್ಬಳ್ಳಿ: ಬೆಳೆಯುತ್ತಿರುವ ನಗರಗಳಲ್ಲಿ, ಬಡ ಜನರಿಗೆ, ಮಧ್ಯಮ ವರ್ಗದ ಜನರಿಗೆ ನಗರ ಪ್ರದೇಶಗಳಲ್ಲಿ ಒಂದು ಗೇಣು ಜಾಗ ಸಿಕ್ಕರೇ ಸಾಕು ಎನ್ನುವ ಮನೋಭಾವ ಎಲ್ಲರಲ್ಲೂ ಇದೆ. ಅದರಂತೆ ಸರಿಯಾದ ದಾಖಲೆ ಹೊಂದಿದ ಜಾಗವನ್ನು ಖರೀಧಿಸಲು ಕೆಲವರಿಗೆ ಕಷ್ಟವೂ ಹೌದು. ಆದ್ರೆ ಇಂತವರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡ ನಗರದ ಕೆಲ ವಂಚಕರು ಅಕ್ರಮ ಸಕ್ರಮ ಸೈಟ್ ಗಳನ್ನು ನಿರ್ಮಿಸಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯ ಅಕ್ರಮ ಸೈಟ್ ನಿರ್ಮಾಣ ಮಾಡಲು ಸರ್ಕಾರ ಯಾವುದೇ ರೀತಿಯ ಅನುಮತಿಯಾಗಲೀ, ಪರವಾಣಿಗಿಯಾಗಲೀ ನೀಡುವುದಿಲ್ಲ. ಆದ್ರೇ ಸರ್ಕಾರದಲ್ಲಿನ ಕಾಣದ ಕೈಗಳನ್ನು ವಂಚಕರು ಬಿಸಿ ಮಾಡುವ ಮೂಲಕ ನಗರದಲ್ಲಿ ಕದ್ದು ಮುಚ್ಚಿ ಅಕ್ರಮ ಲೇಔಟ್ ನಿರ್ಮಿಸಿದ್ದಾರೆ.


ಪ್ರಮುಖವಾಗಿ ಜಾಗದ ದಾಖಲೆಗಳು ಮೂಲ ಮಾಲೀಕರ ಹೆಸರಿನಲ್ಲೇ ಇರುತ್ತವೆ. ಆದ್ರೇ ಅಲ್ಲಿ ನಿರ್ಮಿಸುವ ಸೈಟ್ ಗಳನ್ನು ಹಂತ ಹಂತವಾಗಿ ಬಾಂಡ್ ಪೇಪರಗಳಲ್ಲಿ ಬರೆದುಕೊಡುವ ಮೂಲಕ ವಂಚಕರು ಮಾರಾಟ ಮಾಡುತ್ತಿದ್ದಾರೆ. ಸೈಟ್ ಖರೀದಿ ಮಾಡಲು ಬಾಂಡ್ ಪೇಪರ್ ಗೆ ಯಾವುದೇ ಬೆಲೆ ಇಲ್ಲ ಎಂದು ತಿಳಿದಿದ್ದರು ಸಹ ಜನರಿಗೆ ಕೆಲ ಬಿಲ್ಡರ್ ಗಳು ವಂಚಿಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹೈವೇ ರಸ್ತೆಯ ಬದಿಯಲ್ಲಿ ಇಂತಹ ಅಕ್ರಮ ಲೇವುಟ್ ತಲೆ ಎತ್ತಿ ನಿಂತಿರುವುದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
ಹುಬ್ಬಳ್ಳಿಯ ಹೈವೇ ರಸ್ತೆಯ ಬದಿಯಲ್ಲಿ ಸುಮಾರು ಆರು ಎಕರೆ ಪ್ರದೇಶದಲ್ಲಿ ಈಗಾಗಲ್ಲೇ ಅಕ್ರಮ ಸೈಟ್ ಗಳು ನಿರ್ಮಾಣಗೊಂಡಿವೆ. 2030, 3040, 4060, 3050 ಹೀಗೇ ನೂರಾರು ಸೈಟ್ ಗಳನ್ನು ನಿರ್ಮಿಸಿ ಕೇವಲ ನಾಲ್ಕೈದು ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ಖರಿದಿ ಮಾಡುವವರಿಗೆ ಲಾಭ ತಂದುಕೊಟ್ಟರು, ಮುಂದೆ ಖರೀದಿ ಮಾಡಿದ ಸೈಟ್ ಗಳ ದಾಖಲೆ ಸರಿ ಮಾಡಿಕೊಳ್ಳಲು ಕೋರ್ಟ್ ಕಚೇರಿ ಅಲೆಯ ಬೇಕಿದೆ.


ಆದ್ರೇ ಇಂತಹ ಅಕ್ರಮ ಲೇಔಟ್ ಗಳು ಪ್ರತಿನಿತ್ಯ ತಲೆ ಎತ್ತಿ ನಿಲ್ಲುತ್ತಿದ್ದ ಸರ್ಕಾರದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಫುಟ್ ಪಾತ್ ಅಂಗಡಿಯವರ ಮೇಲೆ ದರ್ಪ ತೋರುವ ಅಧಿಕಾರಿಗಳು ಒಂದು ಸಲ ಇಂತ ಲೇಔಟ್ ಕಡೆಯೂ ದೃಷ್ಟೀ ಹಾಯಿಸಬೇಕಿದೆ. ಇದರಿಂದ ಸಾವಿರಾರು ಬಡ ಜನರ ಕಷ್ಟ ಪಟ್ಟು ದುಡಿದ ಹಣ ವಂಚಕರ ಪಾಲಾಗುವುದು ತಪ್ಪುತ್ತದೆ.

Share News

About Shaikh BigTv

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *