ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಬಳಸಿದ್ದ ಎರಡು ಕಾರುಗಳನ್ನು ತನಿಖಾ ತಂಡ ಶುಕ್ರವಾರ ಜಪ್ತಿ ಮಾಡಿದೆ.
ಹಂತಕರು ಹತ್ಯೆ ಮಾಡುವ ಮೊದಲು ಒಂದು ಕಾರು, ನಂತರ ಅಲ್ಲಿಂದ ಪರಾರಿಯಾಗಲು ಮತ್ತೊಂದು ಕಾರು ಬಳಸಿರುವುದು ತನಿಖೆಯಿಂದ ದೃಢಪಟ್ಟಿದೆ.
ಜಾರ್ಖಂಡ್ ರಾಜ್ಯದಲ್ಲಿ ನೋಂದಣಿಯಾದ ಸಂಖ್ಯಾಫಲಕ ಇರುವ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ಹಾಗೂ ಬೆಂಗಳೂರಿನ ಕೆಂಗೇರಿಯ ನೋಂದಣಿ ವಿಳಾಸ ಹೊಂದಿರುವ ಕೆಂಪು ಬಣ್ಣದ ಹುಂಡೈ ಐ-20 ಕಾರನ್ನು ಬಳಸಿದ್ದಾರೆ.
ಹತ್ಯೆಯ ದಿನ ಅಂದರೆ ಫೆ.20ರ ಬೆಳಿಗ್ಗೆ ಹರಿತವಾದ ಮೂರು ಲಾಂಗ್‌ಗಳನ್ನು ಭದ್ರಾವತಿಯ ಕುಲುಮೆಯೊಂದರಲ್ಲಿ ಸಿದ್ಧಪಡಿಸಿರುವುದು ಪತ್ತೆಯಾಗಿದೆ. ಅಂದು ಬೆಳಿಗ್ಗೆಯಿಂದಲೇ ಸೀಗೆಹಟ್ಟಿ ಬಳಿ ಕಾರಿನಲ್ಲಿ ಕುಳಿತ ಆರೋಪಿಗಳು ಹರ್ಷ ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದರು. ರಾತ್ರಿ ಹೋಟೆಲ್‌ಗೆ ಬಂದಿದ್ದ ಸಮಯದಲ್ಲಿ ಹತ್ಯೆ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಖಚಿತವಾಗಿದೆ. ‘ಆರೋಪಿಗಳಲ್ಲಿ ಒಬ್ಬ ಹಳೆಯ ಕಾರುಗಳ ಮಾರಾಟದ ವ್ಯವಹಾರ ನಡೆಸುತ್ತಿದ್ದು, ಮಾರಾಟಕ್ಕೆ ಗ್ರಾಹಕರು ನೀಡಿದ ಕಾರುಗಳನ್ನು ಕೃತ್ಯಕ್ಕೆ ಬಳಸಿರಬಹುದು ಎಂಬ ಸಂಶಯವಿದೆ’ ಎಂದು ತನಿಖಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

