ದಾವಣಗೆರೆ : ಹಸು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ನಡೆದಿದೆ.ವ್ಯಕ್ತಿಯೊಬ್ಬ ಅಪೆ ಆಟೋದಲ್ಲಿ ಹಸು ಸಾಗಿಸುತ್ತಿದ್ದ.ಈ ವೇಳೆ ಹಲವು ಯುವಕರಿಂದ ಚಾಲಕನಿಗೆ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಕೆಲ ಯುವಕರು ಚಾಲಕನಿಗೆ ಥಳಿಸಿದ್ದಾರೆ.ವಿಷಯ ತಿಳಿದು ಮತ್ತೊಂದು ಗುಂಪು ಸ್ಥಳಕ್ಕೆ ಆಗಮಿಸಿದಾಗ ಎರಡೂ ಗುಂಪುಗಳ ನಡುವೆಪರಸ್ಪರ ಕಿತ್ತಾಟ ನಡೆದಿದೆ.ಬಳಿಕ ಪೊಲೀಸರಿಗೆ ಮಾಹಿತಿ ದೊರೆತರೂ ಸಹ ಉದ್ವಗ್ನಗೊಂಡ ಪರಿಸ್ಥಿತಿ ನಿಯಂತ್ರಣಕ್ಕೆ ತರಲುಬಸವನಗರ ಪೋಲಿಸರು ಹರಸಾಹಸ ಪಡುವಂತಾಯಿತು. ಹಲ್ಲೆ ನಡೆಸಿದ ಯುವಕರ ಬಗ್ಗೆ ಇನ್ನೂ ಮಾಹಿತಿ ಪತ್ತೆಯಾಗಿಲ್ಲ.ಬಸವನಗರ ಪೋಲಿಸ್ ರಿಂದ ವಿಚಾರಣೆ ಮುಂದುವರೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





