Breaking News

ಬ್ರಿಟಿಷ್‌ ಕಾಲದ ಕಾಯ್ದೆ ಬದಲಾಯಿಸಲು ಚಿಂತನೆ: ಸಚಿವೆ ಶೋಭಾ ಕರಂದ್ಲಾಜೆ

ಬ್ರಿಟಿಷರ ಕಾಲದ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ನಾಲ್ಕು ಸಂಹಿತೆಗಳನ್ನು (ಕೋಡ್‌) ರೂಪಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವುದಕ್ಕಾಗಿ ಒಂದು ಸಂಹಿತೆ ಇರಲಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಬ್ರಿಟಿಷರು ಇಲ್ಲಿನ ದುಡಿಮೆಗಾರರನ್ನು ಕಾರ್ಮಿಕರೆಂಬಂತೆ ನೋಡದೆ ಗುಲಾಮರು ಎಂದು ಭಾವಿಸಿದ್ದರು. ಅವರು ರೂಪಿಸಿದ 29 ಕಾರ್ಮಿಕ ಕಾಯ್ದೆಗಳಿವೆ. ಅವೆಲ್ಲವನ್ನು ಕೇಂದ್ರ ಸರ್ಕಾರ ಒಟ್ಟುಗೂಡಿಸಿ ನಾಲ್ಕು ಸಂಹಿತೆ ಮಾಡಲಿದೆ ಎಂದು ವಿವರಿಸಿದರು.ಮಹಿಳೆಯರು ಆಟೊ ಚಾಲಕರಾದರೆ ಮಹಿಳಾ ಪ್ರಯಾಣಿಕರು ಧೈರ್ಯವಾಗಿ ರಾತ್ರಿಯೂ ಸಂಚರಿಸಲು ಸಾಧ್ಯ ಎಂದರು.ಸಿಜಿಐ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷರಾದ ಶ್ರೀವಿದ್ಯಾ ನಟರಾಜ್, ಸಾರಿಕಾ ಪ್ರಧಾನ್, ಸಿಎಸ್‌ಆರ್‌ ಮುಖ್ಯಸ್ಥರಾದ ಸುಧಾಕರ್ ಪೈ, ಬಿ.ಪ್ಯಾಕ್‌ ಸದಸ್ಯರಾದ ಮಿಮಿ ಪಾರ್ಥ ಸಾರಥಿ, ಚಿತ್ರ ತಲ್ವಾರ್‌, ಕಾವೇರಿ ಭಾಗವಹಿಸಿದ್ದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *