Breaking News

ಸೀರಿಯಲ್‌ನಲ್ಲಿ ಗ್ರೀಷ್ಮಾ ಪಾತ್ರದಲ್ಲಿ ಕಾವ್ಯಾ ರಮೇಶ್ ನಟಿಸುತ್ತಿದ್ದಾರೆ….

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಗೌರಿಶಂಕರ’. ಈ ಸೀರಿಯಲ್‌ನಲ್ಲಿ ಗ್ರೀಷ್ಮಾ ಪಾತ್ರದಲ್ಲಿ ಕಾವ್ಯಾ ರಮೇಶ್ ನಟಿಸುತ್ತಿದ್ದಾರೆ. ಚಿಕ್ಕದೊಂದು ಗ್ಯಾಪ್‌ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತಾವಲ್ಲಭ’ ಧಾರಾವಾಹಿಯಲ್ಲಿ ನಾಯಕ ಆರ್ಯನ ತಂಗಿ ಅದಿತಿಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಕಾವ್ಯಾ ರಮೇಶ್ ತದ ನಂತರ ಕಾಣಿಸಿಕೊಂಡಿದ್ದು ಸಿನಿಮಾಗಳಲ್ಲಿ.

‘ಶಭಾಷ್ ಬಡ್ಡಿಮಗ್ನೇ’ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡಿದ್ದ ಕಾವ್ಯಾ ರಮೇಶ್ ‘ನಚ್ಚಿನಾವುಡು’ ಎನ್ನುವ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಸಿನಿಮಾ ರಂಗದಲ್ಲಿ ನಟನಾ ಕಂಪನ್ನು ಪಸರಿಸಿದ ಬೆಡಗಿ. ಇದೀಗ ಗ್ರೀಷ್ಮಾ ಆಗಿ ಕಿರುತೆರೆಗೆ ಮರಳಿರುವ ಕಾವ್ಯಾ ರಮೇಶ್ ಅವರಂತೂ ಸಕತ್ ಖುಷಿಯಲ್ಲಿದ್ದಾರೆ. “ಗ್ರೀಷ್ಮಾ ಪಾತ್ರ ತುಂಬಾ ಒಳ್ಳೆಯ ಪಾತ್ರ” ಎಂದು ಹೇಳುತ್ತಾರೆ ಕಾವ್ಯಾ ರಮೇಶ್.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *