ಶುಕ್ರವಾರ ವಿವೇಕ್ ವಿಹಾರ್‌ನ ಸತ್ಯಂ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಧಿಕಾರಿಗಳಿಗೆ ಆಘಾತಕಾರಿ ಕರೆ ಬಂದಿತು. ಅಧಿಕಾರಿಗಳು ಸ್ಥಳಕ್ಕೆ ಬಂದಾಗ, ಮನೆ ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡರು ಆದರೆ ಹಿಂಬಾಗಿಲಿನ ಬಳಿ ರಕ್ತದ ಕಲೆಗಳು ಕಂಡುಬಂದವು.ಶವ ಪತ್ತೆಯಾಗಿ ಒಂದು ದಿನದ ಒಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಲಾಗಿದೆ.ವಿಚಾರಣೆಯ ಸಮಯದಲ್ಲಿ, ಮಿಶ್ರಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ಮೇರೆಗೆ ಇನ್ನಿಬ್ಬರು ಬಂಧಿಸಲಾಗಿದೆ.ಮೂರನೇ ಶಂಕಿತ ಆಶಿಶ್ ಕುಮಾರ್‌ಗಾಗಿ ಇನ್ನೂ ಶೋಧ ಮುಂದುವರೆದಿದೆ. ಕ್ರೂರ ಹತ್ಯೆಯ ಹಿಂದಿನ ನಿಖರವಾದ ಉದ್ದೇಶವನ್ನು ಕಂಡುಹಿಡಿಯಲು ತನಿಖಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

