Breaking News

ಇಂದು ವರ್ಷದ ಮೊದಲ ಸೂರ್ಯಗ್ರಹಣ; ಭಾರತಕ್ಕಿಲ್ಲ ಆತಂಕ

ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 5 ರಿಂದ 9:18 ರವರೆಗೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದ್ದು, ಇದನ್ನು ಭಾರತೀಯರು ನೋಡಲು ಸಾಧ್ಯವಿಲ್ಲ. ತಜ್ಞರು ಪ್ರಕಾರ ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸಲ್ಲ, ಹೀಗಾಗಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಭಾಗಶಃ ಸೌರ ಗ್ರಹಣವು ಈಶಾನ್ಯ ಏಷ್ಯಾದ ಸೈಬೀರಿಯಾ, ಮಂಗೋಲಿಯಾ, ಉತ್ತರ ಪೆಸಿಫಿಕ್, ಚೀನಾ, ಕೊರಿಯಾ, ಜಪಾನ್​ ರಾಷ್ಟ್ರಗಳಲ್ಲಿ ಗೋಚರಿಸಲಿದೆ ಅಂತ ಹೇಳಿದ್ದಾರೆ. ಸೂರ್ಯನ ಗ್ರಹಣದ ನಂತರ ಈ ತಿಂಗಳ 21 ರಂದು ಚಂದ್ರಗ್ರಹಣ ಜರುಗಲಿದೆ. ವರ್ಷದ ಮೊದಲ ಚಂದ್ರಗ್ರಹಣ 21ರ ರಾತ್ರಿ 9:03 ರಿಂದ 12:20 ಗಂಟೆಗಳವರೆಗೆ ಇರುತ್ತದೆ. ಸೂರ್ಯ ಗ್ರಹಣದಂತೆ, ಚಂದ್ರಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

Share News

About Shaikh BIG TV NEWS, Hubballi

Check Also

ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ….

ದಾವಣಗೆರೆ: ಮುಖ್ಯ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಬಿಜೆಪಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮಾತನಾಡಿರುವ ಕುರಿತು …

Leave a Reply

Your email address will not be published. Required fields are marked *

You cannot copy content of this page