ನವಲಗುಂದ : ಜೀವಜಲವಾದ ನೀರುನ್ನು ನವಲಗುಂದ ಪಟ್ಟಣದಲ್ಲಿ ಬೇಕಾಬಿಟ್ಟಿ ಬಳಕೆ ಮಾಡುತ್ತಿರುವ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ ಈಗಾಗಲೇ ರಾಜ್ಯದಲ್ಲಿ ಮಳೆ ಆಗದೇ ಕೆಲವು ಕಡೆ ಜಲಕ್ಷಾಮ ಆಗುವುದನ್ನು ನೋಡಬಹುದು. ಆದರೆ ಪಟ್ಟಣದಲ್ಲಿ ಕುಡಿಯುವ ನೀರು ಬೇಕಾಬಿಟ್ಟಿ ಪೋಲಾಗವುದನ್ನು ನಿಯಂತ್ರಿಸುವಲ್ಲಿ ಯಾರು ಮುಂದೆ ಬರುತ್ತಿಲ್ಲ. ಎಂಬ ಅಪಸ್ವರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕುಡಿಯುವ ನೀರನ್ನು ಸ್ಥಳೀಯರು. ಸುಖಾ ಸುಮ್ಮನೆ ನಲ್ಲಿಯನ್ನು ಬಂದ ಮಾಡದೇ ರಸ್ತೆಯ ಮೇಲೆ ಹರಿದು ಹೋಗಲು ಬಿಡುತ್ತಾರೆ. ಅಷ್ಟೇ ಅಲ್ಲದೇ ಮನೆಯ ಮುಂದೆ ಇರುವ ರಸ್ತೆ ಶುದ್ಧ ಮಾಡಲು, ವಾಹನಗಳನ್ನು ಸ್ವಚ್ಚತೆ ಮಾಡಲು, ಬಟ್ಟೆ ತೊಳೆಯಲು, ದನಕರುಗಳ ಮೈ ತೊಳೆಯಲು, ಹಾಗೂ ಇತರೆ ಕೆಲಸಕ್ಕಾಗಿ ಪುರಸಭೆ ಒದಗಿಸುವ ಕುಡಿಯಲು ನೀಡುವ ನೀರನ್ನು ಬಳಕೆಮಾಡಿಕೊಳ್ಳೂತ್ತಾರೆ. ಬೇಕಾಬಿಟ್ಟಿ ನೀರಿನ ಬಳಕೆಯಿಂದ ಕುಡಿಯುವ ನೀರು ಮುಂದೆ ಇರುವ ಚರಂಡಿ ಸೇರುವದು. ಇದ್ದರಿಂದ ಸಾಕಷ್ಟು ಪ್ರಮಾನದಲ್ಲಿ ಕುಡಿಯುವ ನೀರು ನವಲಗುಂದ ಪಟ್ಟಣದಲ್ಲಿ ಹಾಳು ಹಾಗುತ್ತಿದೆ. ಸದ್ಯ ಮಂಗಾರು ಮಳೆ ಇರದ ಕಾರಣ ನೀರಿನ ಬಳಕೆಯನ್ನು ಇತಿ ಮಿತಿಯಿಂದ ಉಪಯೋಗ ಮಾಡಿದರೆ ಅನುಕೂಲವಾಗುವದು. ಆದ್ದರಿಂದ ನವಲಗುಂದ ಜನತೆ ಎಚ್ಚೆತ್ತುಕೊಳ್ಳಿ. ಅಧಿಕಾರಿಗಳೇ ಸಾರ್ವಜನಿಕರಿಗೆ ನೀರಿನ ಉಪಯೋಗದ ಬಗ್ಗೆ ತಿಳಿಸಿ ಇಲ್ಲದೆ ಹೊಂದರೆ ಮುಂದೆ ಒಂದು ದಿನ ಕುಡಿಯುವ ನೀರಿಗಾಗಿ ಪರದಾಡ ಬೇಕಾದ ಪರಿಸ್ಥಿತಿ ಬರುವುದು ಅಂತು ಸತ್ಯ.
bigtvnews | Hubli Dharwad News | Kannada News | Karnataka News Hubli News | News In Hubli | Local news





