ದಿ 04 ರಂದು ಸಂಜೆ 4:00 ಗಂಟೆಗೆ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸ್ಟೇಷನ್ ರೋಡ ಪ್ರಶಾಂತ ಆಸ್ಪತ್ರೆ ಮತ್ತು ಐ ವಿ ಎಫ್ ಕೇಂದ್ರ ಆವರಣದಲ್ಲಿ ಜರಗಲಿದೆ ಎಂದು.ಡಾ ಸೌಭಾಗ್ಯ ಕುಲಕರ್ಣಿ ತಿಳಿಸಿದರು ,ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಸಂಸ್ಕಾರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜರುಗಲಿದ್ದು. ಗರ್ಭಿಣಿ ಹಾಗು ಗರ್ಭಿಣಿಯಾಗುವ ಸ್ತ್ರೀಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಪೂಜ್ಯ ವಿಜಯಾನಂದ ಸ್ವಾಮೀಜಿ ವಹಿಸಲಿದ್ದು ಮುಖ್ಯ ಅತಿಥಿ ಗಳಾಗಿ, ಶ್ರೀಮತಿ ವೇದಾ ದಾಸನೂರ ಆಗಮಿಸಲಿದ್ದು. ಶ್ರೀ ಏರಿ ಸ್ವಾಮೀಜಿಯವರು ಗರ್ಭ ಮತ್ತು ಸಂಸ್ಕಾರದ ಮಾಹಿತಿಯನ್ನು ನೀಡಲಿದ್ದಾರೆ ಎಂದರು.
ಗರ್ಭ ಮತ್ತು ಸಂಸ್ಕಾರ ಎಂದರೆ ಒಳ್ಳೆಯ ವಿಷಯಗಳನ್ನು ಕಲಿಸುವುದು ಅಥವಾ ಉತ್ತಮ ಮೌಲ್ಯಗಳನ್ನು ತುಂಬುವುದು. ಹಾಗಾಗಿ ಹುಟ್ಟಲಿರುವ ಮಗುವಿಗೆ ತಾಯಿಮೂಲಕ ಶಿಕ್ಷಣ ನೀಡುವುದಾಗಿದೆ ಎಂದರು

ಪ್ರತೀ ತಾಯಿಗೆ ಮಗುವಿನ ಜನನ ಎನ್ನುವುದು ಬದುಕಿನ ಅತೀ ಮಹತ್ವದ ಘಟ್ಟ. ತನ್ನದೇ ರಕ್ತ ಹಂಚಿಕೊಂಡು ಇನ್ನೊಂದು ಜೀವಕ್ಕೆ ಜೀವ ನೀಡಿ ಸಲಹುವ ಶಕ್ತಿ ಇರುವುದು ಆಕೆಗೆ ಮಾತ್ರ. ತನ್ನ ಮಗುವನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು, ಒಳ್ಳೆಯ ಸಂಸ್ಕಾರ ನೀಡಬೇಕು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕುವಂತೆ ಮಾಡಬೇಕು ಹೀಗೆ ಒಡಲೊಳಗಿನ ಜೀವದ ಭವಿಷ್ಯವನ್ನು ಕಟ್ಟುವ ಕನಸು ಕಾಣುವವಳು ಹೆಣ್ಣು,
ಯಾವಾಗ ಹೆಣ್ಣು ತನ್ನ ಗರ್ಭಧರಿಸುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಾಳೋ ಆಗಿನಿಂದಲೇ ಗರ್ಭಸಂಸ್ಕಾರದ ಹಂತಗಳು ಆರಂಭವಾಗುತ್ತವೆ ಎಂದರು.
ಪ್ರಾಪಂಚಿಕ ಅರಿವನ್ನೇ ಹೊಂದಿರದ ಮಗುವಿಗೆ ತಾಯಿಯ ಗರ್ಭದಲ್ಲಿಯೇ ಸಂಸ್ಕಾರವನ್ನು ನೀಡಲಾಗುತ್ತದೆ. ಅದನ್ನೇ ಗರ್ಭಸಂಸ್ಕಾರ ಎನ್ನುವುದು. ಆಯುರ್ವೇದ ವಿಧಾನದಲ್ಲಿ ನೀಡುವ ಈ ಗರ್ಭಸಂಸ್ಕಾರ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಹಾಗೂ ಜೀವನಕ್ಕೆ ಬೇಕಾದ ಸದ್ಗುಣಗಳನ್ನು ತರಬೇತಿ ನೀಡುವುದಾಗಿದೆ ಎಂದರು.
ಕಾರ್ಯಕ್ರಮದ ರೂವಾರಿಗಳಾದ ಡಾ.ಕೋಮಲ್ ಕುಲಕರ್ಣಿ(ರೇವಣಕರ್) ಪತ್ರಿಕಾಗೋಪ್ಟಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





