ಮೊನ್ನೆ ತಾನೆ ಪ್ರಸಾರವಾದ ಬಿಗ್ ಟಿವಿ ನ್ಯೂಸ್ ಸುದ್ದಿಗೆ ಎಚ್ಚೆತ್ತುಕೊಂಡ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.ಎಗ್ಗಿಲ್ಲದೆ ಹಾಡು ಹಗಲೇ ಮಟ್ಕಾ ದಂದೆ ನಡೆದರು ಅದು ಪೊಲೀಸರ ಗಮನಕ್ಕೆ ಬಂದಿದ್ಯೋ ಇಲ್ವೋ ಗೊತ್ತಿಲ್ಲಾ. ಆದ್ರೆ ಬಿಗ್ ಟಿವಿ ನ್ಯೂಸ್ ಪ್ರಸಾರ ಮಾಡಿರುವ ಸುದ್ದಿಯಿಂದ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ, ಅವರಿಂದ 5700 ನಗದು ವಶಪಡಿಸಿಕೊಂಡಿದ್ದಾರೆ. ಕಾನೂನು ಭಾಹಿರ ಚಟುವಟಿಕೆಯಲ್ಲಿ ಯಾರೇ ಬಾಗಿಯಾಗಿದ್ದರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ ಕಮಿಷನರ್ ಭರವಸೆ
ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ತನಿಖೆ ಮಾಡುವುದಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಬಿಗ್ ಟಿವಿ ನ್ಯೂಸ್ಗೆ ಟ್ವಿಟ್ ಮುಖಾಂತರ ಧನ್ಯವಾದ ವ್ಯಕ್ತಪಡಿಸಿದ್ದಾರೆ.ಮುಂದೆ ಕೂಡ ಬಿಗ್ ಟಿವಿ ನ್ಯೂಸ್ ಅಕ್ರಮ ದಂಧೆಗಳ ಬಗ್ಗೆ ಹಾಗೂ ಸಾಮಾಜಿಕ ಘಾತಕರ ಬಗ್ಗೆ ಮಾಹಿತಿ ಕೊಡುವ ಮೂಲಕ ಕಾನೂನು ಸುವ್ಯವಸ್ತೆ ಕಾಪಾಡಲು ಸಾಥ್ ನೀಡುವ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

