ದಿನೇ ದಿನೇ ತಿರುವು ಪಡೆಯುತಿರುವ ಯುವಕನ ಬೆತ್ತಲೆ ಪ್ರಕರಣ.ಯುವಕನ ಬೆತ್ತಲೆಗೊಳಿಸಿದ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಈಗಾಗಲೇ ಐದು ಜನ ಯುವಕರು ಹಲ್ಲೆ ಮಾಡಿದ ಬಗ್ಗೆ ವಿಡಿಯೋ ವೈರಲ್ ಆಗಿತ್ತು, ಆದರೆ ಹಲ್ಲೆ ಮಾಡಿದ್ದು ಮಾ ತ್ರ 20ಕ್ಕೂ ಯುವಕರ ಟೀಮ್ ಎಂದು ಹೊಸ ವಿಡಿಯೋ ಈಗ ವೈರಲ್ ಆಗಿದೆ.
ಯುವಕನ ಮೇಲೆ ಹಲ್ಲೆ ಮಾಡಿದ್ದು ಐದು ಜನ ಯುವಕರ ಟೀಮ್ ಅಲ್ಲವೇ ಅಲ್ಲ ,ಹಲ್ಲೆ ಮಾಡಿದ್ದು ಮಾತ್ರ 20ಕ್ಕೂ ಹೆಚ್ಚು ಯುವಕರ ಟೀಮ್ ಎಂದು ಹೊಸ ವಿಡಿಯೋ
ವೈರಲ್ಆಗಿದೆ.
ಗುಂಪು ಗುಂಪಾಗಿ ಯುವಕರು ಸುತ್ತಲೂ ನಿಂತುಕೊಂಡು ಸಂದೀಪ ನನ್ನು ಹಿಗ್ಗಾ ಮುಗ್ಗಾ ನೆಲದ ಮೇಲೆ ಕೂಡಿಸಿ ತಳಿಸುತ್ತಿರುವ ದ್ರಶ್ಯ ವಿಡಿಯೋ ದಲ್ಲಿದೆ .ಯುವಕರು ಒಬ್ಬರು ಕೂದಲನ್ನು ಹಿಡಿದುಕೊಂಡರೆ,ಇನ್ನೊಬ್ಬರು ಹಿಂದಿನಿಂದ ಒದೆಯುವುದು,ಮತ್ತೊಬ್ಬರು ಬಡಿಯುವ ದ್ರಶ್ಯ ವಿಡಿಯೋದಲ್ಲಿ ಸೆರೆ ಯಾಗಿದೆ.ಪರಿ ಪರಿಯಾಗಿ ಬೇಡಿಕೊಂಡರು ಸಂದೀಪನನ್ನು ಬಿಡದ ಯುವಕರು ಅಟ್ಟಹಾಸ ಮೆರೆದಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಸಂದೀಪನನ್ನು ಬೆತ್ತಲೆ ಗೊಳಿಸಿ ಹಲ್ಲೇ ಮಾಡಿರುವ ಎರಡು ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲಿಯೇ ಮತ್ತೊಂದು ವಿಡಿಯೋ ವೈರಲ್ ಆಗಿರುವುದು ಕಂಡುಬಂದಿದೆ .ಈ ಪ್ರಕರಣದ ಕುರಿತು ಈಗಾಗಲೇ ಇವರನ್ನು ಬೆಂಡೆಗೇರಿ ಪೊಲೀಸರು ಬಂಧಿಸಿದ್ದಾರೆ.ಇನ್ನು ಇನ್ನು ಹೊಸ ಹೊಸ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲಿಯೇ ಈ ಪ್ರಕರಣದಲ್ಲಿ ಇನ್ನಸ್ಟು ಕೂತೂಹಲ ಕಾರಿಯಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





