ಧಾರವಾಡ ಗಾಣಿಗ ಸಮಾಜ ಸಮುದಾಯವು ಈ ನಾಡಿಗೆ ಈ ಜಗತ್ತಿಗೆ ಬೆಳಕನ್ನು ನೀಡಿದ ಸಮಾಜ,ನಮ್ಮ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ, ಹಾಗೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಕ್ಕನ್ನು ಪಡೆಯಲು ಸುವರ್ಣ ಕರ್ನಾಟಕ ಗಾಣಿಗರ ಮಹಾಸಭಾ ಹೊಸ ಪರಿಕಲ್ಪನೆಯ ಸಂಘಟನೆಯನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಲಾಗಿದೆ,
ಈ ಸಂಘಟನೆಯ ಜೊತೆಗೆ ಕೈಜೋಡಿಸಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪುವಂತೆ ಸಂಘಟನೆಯ ಮೂಲಕ ಹೋರಾಡಲು ಮುಂದಾಗಿ ಮಂಡ್ಯ ಜಿಲ್ಲೆಯ ಭೂಕನಕೆರೆಯ ಸ್ವಾಮಿ ಧಾರವಾಡದಲ್ಲಿ ಜರುಗಿದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು, ಗಾಣಿಗ ಜೋತಿ ಮಾಸಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಮಾಡಲಗೇರಿ,
ಗಾಣಿಗ ಸಮಾಜದ ಚಿಂತನೆಗಳು ಕೇವಲ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಕ್ರಿಯಾಶೀಲ ಆಗಿವೆ,ಬಹಳಷ್ಟು ಗಾಣಿಗ ಸಮಾಜದ ಸಂಘಟನೆಗಳಿವೆ, ಆದರೂ ಅವುಗಳ ಕಾರ್ಯಚಟುವಟಿಕೆಗಳು ನಿಷ್ಕ್ರಿಯ ಆಗಿರುವುದು ತುಂಬಾ ಖೇಧಕರ ವಿಷಯ ಎಂದರು, ಅದ್ಯಕ್ಷರಾದ ಮಲ್ಲಪ್ಪ ಹೊಸ್ಕೇರಿ ಮಾತನಾಡಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲೆಯ ಜಿಲ್ಲಾ ಅದ್ಯಕ್ಷರನ್ನಾಗಿ ನನ್ನ ಮೇಲೆ ಭರವಸೆಯನ್ನು ಇಟ್ಟು ಜಿಲ್ಲೆಯ ಸಮಾಜದ ಬಂಧುಗಳು ನನ್ನನ್ನು ಆಯ್ಕೆ ಮಾಡಿದ್ದೀರಿ
ನಿಮಗೆ ನಾನು ಚಿರರುಣಿ ಆಗಿರುವೆ, ನನ್ನ ಹುದ್ದೆಗೆ ಜೀವ ತುಂಬುವ ಕಾರ್ಯವನ್ನು ಮಾಡುವೆ ಎಂದರು, ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವಾದ್ಯಕ್ಷರನ್ನಾಗಿ ಚಿನ್ನಪ್ಪ ಸವದತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಮೀಸಿ,(ಗಾಣಿಗೇರ) ಕೋಶಾದ್ಯಕ್ಷರಾಗಿ ಮಂಜುನಾಥ ಕೋಡಬಳೆ ಹಿರಿಯ ಉಪಾಧ್ಯಕ್ಷರಾಗಿ ಎಸ್ ಎಸ್ ಆವೋಜಿ, ಉಪಾಧ್ಯಕ್ಷರಾಗಿ ಗಂಗಾಧರ ಹೊಸಮನಿ, ಚಂದ್ರಶೇಖರ ಮಾಡಲಗೇರಿ, ದೇವೇಂದ್ರ ನಾಗಲಿಂಗನವರ ಭೂದಪ್ಪ ಬಾಗಲಕೋಟೆ,ಶಿವಯೋಗಿ ಹಣಸಿ,ಶ್ರೀಧರ ಈಶ್ವರ ನರಗುಂದ ಶಶಿಕುಮಾರ್ ಗಾಣಿಗೇರ ಮುಂತಾದವರನ್ನು ಜಿಲ್ಲಾ ಪದಾಧಿಕಾರಿಗಳು ಎಂದು ಆಯ್ಕೆ ಮಾಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





