Breaking News

ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳು

ಧಾರವಾಡ :ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಪ್ರಥಮ ದರ್ಜೆ ಕಾಲೇಜು, ಅಣ್ಣಿಗೇರಿ , ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ನೈಲ್ ಆರ್ಟ್, ಮೆಹಂದಿ, ಕೇಶ್ ವಿನ್ಯಾಸ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಯೋಜಕರಾದ ವಿಜಯಲಕ್ಷ್ಮಿ ಪಾಟೀಲ ಅವರು, ಈ ರೀತಿಯ ಕಾರ್ಯಕ್ರಮಗಳು

ವಿದ್ಯಾರ್ಥಿನಿಯರಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುತ್ತವೆ ಮತ್ತು ತಮ್ಮ ಪ್ರತಿಭೆ ಗುರುತಿಸಿಕೊಳ್ಳಲು ನೆರವಾಗುತ್ತವೆ ಎಂದರು. ಶ್ರೀಮತಿ ದಿಲ್ಲಶದ ನದಾಫ್ ಅವರು ಮುಖ್ಯ ಅತಿಥಗಳಾಗಿ ಆಗಮಿಸಿದ್ದರು, ಮೋತಿಲಾಲ್ ರಾಥೋಡ, ಪ್ರಾಂಶುಪಾಲರು ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ

ಈ ದೇಶದ ಪ್ರಗತಿಗೆ ಅವರ ಕೊಡುಗೆ ಬಹಳ ಅವಶ್ಯವಾಗಿದೆ ಎಂದರು. ಮಹಿಳಾ ಘಟಕ ದ ಸದಸ್ಯರಾದ ಕೀರ್ತಿ ಕಳ್ಳೇರ ಮತ್ತು ಶೋಭಾ ವೇದಿಕೆ ಹಂಚಿಕೊಂಡರು.

ಡಾ. ಎಫ.ಬಿ ಆನಿ‌ ,ಡಾ. ಅನ್ನಪ್ಪ ರೂಟ್ಟಿಗವಾಡ ಮತ್ತು ಎಲ್ಲಾ ಸಿಬಂದ್ದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಧರ ಲೋಣಕರ್ ವಂದನಾರ್ಪಣೆ ಮಾಡಿದರು.

Share News

About BigTv News

Check Also

6 ಲಕ್ಷ ಲಂಚಕ್ಕೆ ಬಲೆ: ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ ಲೋಕಾಯುಕ್ತ ಬಲೆಗೆ!

ಲಂಚದ ಕೇಸ್ ಕ್ಲೋಸ್ ಡೀಲ್: 6 ಲಕ್ಷಕ್ಕೆ ಡಿಸಿ ಲೋಕಾಯುಕ್ತ ಬಲೆಗೆ..! ವಿಚಾರಣೆ ಹೆಸರಿನಲ್ಲಿ ವಸೂಲಿ: ಹುಬ್ಬಳ್ಳಿ ವಾಣಿಜ್ಯ ತೆರಿಗೆ …

Leave a Reply

Your email address will not be published. Required fields are marked *