Breaking News

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

ಧಾರವಾಡ: ಕಳೆದ 6 ತಿಂಗಳಿನಿಂದ ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘ ಸ್ಥಾಪನೆಯಾಗಿದೆ.ಈ ಸಂಘದಲ್ಲಿ ನಿವೃತ್ತಿಯಾದ ನೌಕರರು ಒಗ್ಗೂಡಿಸಿ ಈ ಸಂಘ ಪ್ರಾರಂಭಿಸಿದಿರಿ, ಸಂಘಕ್ಕೆ ಶುಭ ಹಾರೈಸುತ್ತೇನೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘ ವತಿಯಿಂದ ಸಾಂಸ್ಕೃತಿಕ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಎಲ್ಲರು ನಿವೃತ್ತಯಾದ ಮೇಲೂ ಸಮಾಜಕ್ಕೆ ಎನಾದರೂ ಮಾಡಲು ಎಲ್ಲರೂ ಒಟ್ಟಾಗಿ ಪ್ರತಿಭಾವಂತ ಯುವಕರಿಗೆ ಸಹಾಯ ಮಾಡುವುದು ಪ್ರೋತ್ಸಾಹ ಮಾಡಲಹ ಇಂತಹ ಕಾರ್ಯಕ್ರಮ ಮಾಡಲು ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘದಿಂದ ಸ್ಥಾಪನೆ ಆಗಿದ್ದು ಶ್ಲಾಘನೀಯ ಎಂದರು.

ಸಮಾಜ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದು ತಮ್ಮಗೆ ತಿಳಿದಿರುವ ವಿಷಯ ಸ್ವಾತಂತ್ರ್ಯ ಲಭಿಸಿ 75ನೇ ವರ್ಷ ಆದರೂ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಮಾಡಿದರೆ ಮಾತ್ರ ಅಭಿವೃದ್ಧಿ ಆಗೋದಿಲ್ಲ ಇಂತಹ ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈ ಜೋಡಿಸಿ ಕೆಲಸ ಮಾಡಿದರೆ ಅನುಕೂಲವಾಗುವಂತೆ ಎಂದು ಅವರು ಹೇಳಿದರು.
ವಿವಿದ ಜಿಲ್ಲೆಯಲ್ಲಿ ಸ ಅಭಿವೃದ್ಧಿ ಸಂಘ ಸಂಸ್ಥೆಗಳು ಸ್ಥಾಪನೆ ಆಗಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ,ಎಲ್ಲರಿಗೂ ದೇವರು ಆಯುಷ್ಯ ಆರೋಗ್ಯ ನೀಡಲ್ಲಿ ಎಂದು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಿಠ್ಠಲ ಬೆಣಗಿ ಮಾತನಾಡಿ, ದುಡ್ಡು ದೊಡ್ಡಪ್ಪ ಎಂದು ಹೇಳುತ್ತಾರೆ ಆದರೆ ದುಡ್ಡು ಕಳ್ಳತನ ಆಗಬಹುದು, ಆದರೆ ವಿದ್ಯೆಯನ್ನು ಯಾರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ,ಎಲ್ಲಕ್ಕಿಂತ ಶ್ರೇಷ್ಠ ಎಂದರೆ ವಿದ್ಯೆ .
ಸಮಾಜದಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾವಂತರಾಗಿ ಜ್ಞಾನವನ್ನು ವೃದ್ಧಿಸಿಕೊಂಡು ಒಳ್ಳೆಯ ಅಧಿಕಾರಿಗಳಾಗಿ ಸಮಾಜದ ದುರ್ಬಲ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎಂದರುನ

ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾ ಧ್ಯಾಪಕರಾದ ಡಾ. ಪಿ ಎಮ್. ಹೊನಕೇರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದ್ಯಪಕಾರಾದ ಸಂಗೀತಾ ಮಾನೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ನಂತರ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಧಾನ ಸಂಚಾಲಕರಾದ ಯಲ್ಲಪ್ಪ ಸಮಗಾರ ಸ್ವಾಗತಿಸಿದರು, ಗಣೇಶ್ ಕುಂದರಗಿ ವಂದಿಸಿದರು, ಕಿರಣ ಹಾವನೂರ್ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸ ಅಭಿವೃದ್ಧಿ ಸಂಘ ಅಧ್ಯಕ್ಷ ಸುಭಾಷ್ ಬಿ ನೇತ್ರಕರ್, ಚಂದ್ರಶೇಖರ ದೊಡ್ಡಮನಿ, ಬಸವಂತ ಸಣ್ಣಕ್ಕಿ,ಚಂದ್ರಕಾಂತ ಪೂಜಾರ,ಜಗನ್ನಾಥ ಅಗಸಿಮನಿ,ಸಿದ್ದಪ್ಪ ತೇರದಾಳ,ಈಶ್ವರ ತೇರದಾಳ,ಜೆಟ್ಟಪ್ಪ ಕಾಂಬಳೆ,ಕುಬೇರ ದೊಡಮನಿ,ಮಹದೇವಪ್ಪ‌ ನೆಲದುರ್ಗ,ಬಸಪ್ಪ ಮುರಗೋಡ,ಶಿವಕುಮಾರ್ ದೊಡಮನಿ,ಶಿವಾನಂದ ದೊಡಮನಿ,ಲಕ್ಷ್ಮಣ ಬಿಳಗಿ ಸೇರಿದಂತೆ ಇತರರು ಉಪಸ್ಥಿತಿತರಿದರು.

ತ್ಕಾರ ಮಾಡುವುದು ನಿಲ್ಲಿಸಿ,ರಾಜ ದರ್ಬಾರ ರಾಜಮನೆತನಕ್ಕೆ ಮಾಡುವ ಸಂಸ್ಕೃತ ಇನ್ಮುಂದೆ ಇವುಗಳಿಗೆ ತೆರೆ ಎಳೆಯಬೇಕು ಸನ್ಮಾನಕ್ಕೆ ಶಾಲು ಹಾರ ತರಬೇಡಿ ಎಂದು ಮನವಿ ಎಂದರು

Share News

About bigtvnews22

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *