Breaking News

ನಿರಂತರ ಮಳೆಗೆ ಕುಸಿದ ಮನೆಯ ಮೇಲ್ಬಾವಣಿ

ನವಲಗುಂದ: ನವಲಗುಂದ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಸುರಿಯುತ್ತಿರುವ ಮಳೆ ಜನ ಜೀವನವನ್ನೇ ಹೈರಾನ್ ಮಾಡಿದೆ. ಮಳೆ ಆಗಾಗ ಜೋರು ಮಳೆ ಹಾಗೂ ನಿರಂತರ ಜಿಟಿಜಿಟಿಯಾಗಿ ಮಳೆ ಸುರಿಸುತ್ತಿರುವುದು ಹಳೆಯ ಮಣ್ಣಿನ ಗೋಡೆಯ ಮನೆಗಳು ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬೆಳವಟಗಿ ಗ್ರಾಮದ ಮಂಜುಳಾ ಜಾವೂರ ಎಂಬುವರ ಮನೆ ಮೇಲ್ಟಾವಣಿ ಕುಸಿದು ಬಿದ್ದಿದೆ ಇದರಿಂದ ಆ ಬಡ ಕುಟುಂಬ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಇನ್ನು ತಾಲೂಕಿನಲ್ಲಿ 8 ಮನೆಗಳು ಭಾಗಶಃ ಬಿದ್ದಿವೆ ಅರೇಕುರಹಟ್ಟಿ 2 ಮನೆಗಳು, ಶಿರೂರ, ಅಳಗವಾಡಿ ಮತ್ತು ಯಮನೂರ ತಲಾ 1 ಮನೆಗಳು, ಮೊರಬ 3 ಮನೆಗಳು ಈ ಗ್ರಾಮದಲ್ಲಿ ಭಾಗಶಃ ಬಿದ್ದಿವೆ ಎಂದು ತಹಸಿಲ್ದಾರ್ ಪ್ರಕಾಶ ಹೊಳಪ್ಪಗೋಳ ತಿಳಿಸಿದ್ದಾರೆ.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *