Breaking News

ಟಿ. ಬಿ. ಜಯಚಂದ್ರ ಅವರಿಗೆ ಕಾನೂನಾತ್ಮಕವಾಗಿ ಏನು ಬೇಕು ಅದನ್ನ ಕೊಡುತ್ತೇವೆ: ಎಚ್ ಕೆ ಪಾಟೀಲ್

ಹುಬ್ಬಳ್ಳಿ: ಶಾಸಕರ ಅಸಮಾಧಾನ ತಣಿಸಲು ಆಗಸ್ಟ್ 2ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ಕರೆದ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ ಕೆ ಪಾಟೀಲ್ ದೆಹಲಿಯಲ್ಲಿ ಕರೆದ ಸಭೆಗೂ ಶಾಸಕರ ಅಸಮಾಧಾನಕ್ಕೂ ಸಂಬಂಧ ಬೇಡ ಎಂದರು. ರಾಹುಲ್ ಗಾಂಧಿಯವರು ಸಭೆ ಕರೆದಿದ್ದು ಪಕ್ಷದ ಸಂಘಟನೆ ಸಲುವಾಗಿ ಆಡಳಿತದಲ್ಲಿ ಏನೆಲ್ಲಾ ಸುಧಾರಣೆ ತರಬೇಕೆಂಬ ನಿಟ್ಟಿನಲ್ಲಿ ಚರ್ಚೆ ಮಾಡುವ ಸಲುವಾಗಿ ಎಂದರು. ಈ ಎರಡು ಸಭೆ ಸಹ ಅನಿವಾರ್ಯ ಕಾರಣದಿಂದ ಮುಂದೂಡಲಾಗಿತ್ತು ,ಆದರೆ ಅಗಸ್ಟ 2ರಂದು ಸಭೆ ನಿಗದಿಯಾಗಿದೆ ಎಂದು ಪಾಟಿಲ್ ಹೇಳಿದರು. ಇದಕ್ಕೆ ಯಾವುದೇ ರೀತಿಯಲ್ಲಿ ಬೇರೆ ಲಿಂಕ್ ಕೊಡುವುದು ಬೇಡ ಎಂದರು ಮೇಲಿಂದ ಮೇಲೆ ಸಭೆ ಕರೆಯುತ್ತಿದ್ದಾರೆ ಇದೊಂದು ಪಕ್ಷದ ಆಂತರಿಕ ಸಭೆ ದೆಹಲಿ ಸಭೆಗೂ ಶಾಸಕರ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ ಈಗಾಗಲೇ ಶಾಸಕರ ಬೇಡಿಕೆ ಮತ್ತು ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ ವರಿಷ್ಠರಾದ ರಾಹುಲ್ ಗಾಂಧಿ ಎಐಸಿಸಿ ಸಭೆ ಕರೆದಿದ್ದು ನಿಜ ಎಂದರು .

ಸಚಿವ ಟಿ ಬಿ ಜಯಚಂದ್ರ ಅವರಿಗೆ ಜೀವ ಬೆದರಿಕೆ ಬಂದಿದ್ದು ನಿಜ ಇದು ಕಾನೂನು ಮಾಧ್ಯಮದಲ್ಲೂ ಸಹ ನೋಡಿದೆ ಈ ಕುರಿತು ಮಾಹಿತಿ ಸಹ ಪಡೆದುಕೊಂಡಿದ್ದೇವೆ ಎಂದರು. ಆದರೆ ಇಂತಹ ಬೆದರಿಕೆಗೆ ಜೈಚಂದ್ರ ಜಗ್ಗಲ್ಲ ಬಗ್ಗಲ್ಲ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ .ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ನೈಜ ನೈಸ್ ಯೋಜನೆ ಕುರಿತು ಒಳ್ಳೆಯ ವರದಿ ಕೊಟ್ಟಿದ್ದಾರೆ, ಹಾಗೂ ನಿಷ್ಪಕ್ಷಪಾತ ಹಾಗೂ ಒಳ್ಳೆಯ ವರದಿ ಕೂಡ ಕೊಟ್ಟಿದ್ದಾರೆ ಈ ವರದಿಯ ಹಿನ್ನೆಲೆಯಲ್ಲಿ ಇಂತಹ ಕರೆ ಬಂದಿರಬಹುದುಎಂದು ಜಯಚಂದ್ರ ಅವರು ಹೇಳಿದ್ದಾರೆ ಎಂದು ಎಚ್ ಕೆ ಪಾಟೀಲ್ ಹೇಳಿದರು. ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಹೇಗೆ ಮಾಡಬೇಕು ಎಂಬ ಚಿಂತನೆ ನಡೆಸಲಾಗಿದೆ ಸಾಕಷ್ಟು ಪ್ರವಾಸಿ ತಾಣಗಳಿಗೆ ಜನರು ಹೋಗುತ್ತಿದ್ದಾರೆ ಅಲ್ಲಿನ ಮೂಲ ಸೌಕರ್ಯ ಸೇರಿದಂತೆ ಅಗತ್ಯವಾದಂತಹ ನೆರವು ನೀಡಲಾಗುವುದು ಎಂದು ಹೇಳಿದರು.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *