Breaking News

ಗೋವನಾಳ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ…

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜನಗೌಡ ನಿಂಗನಗೌಡ ಕೆಂಚನಗೌಡ್ರ ಮತ್ತು ಉಪಾಧ್ಯಕ್ಷೆಯಾಗಿ ನಿರ್ಮಲಾ ಚಂದ್ರಶೇಖರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೂರು ಗ್ರಾಮಗಳಾದ ಗೋವನಾಳ ಗುಲಗೊಂಜಿಕೊಪ್ಪ, ವಡೆಯರ ಮಲ್ಲಾಪುರ ಇರುವ ಪಂಚಾಯತಿಗೆ 8 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇಬ್ಬರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಎಂ.ಎಂ ಹವಳದ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಪಂ ಸದಸ್ಯರಾದ ಸುಶೀಲವ್ವ ಮರಿಲಿಂಗನಗೌಡ್ರ, ಸುಧಾ ಮಾದರ, ಅಣ್ಣಪ್ಪ ರಾಮಗೇರಿ, ಕರಿಯಪ್ಪಗೌಡ ಹೊಸಗೌಡ್ರಇದ್ದರು.ಬಿಜೆಪಿ ಮುಖಂಡರಾದ ಪ್ರವೀಣ ಬೋಮಲೆ ಸಿದ್ದುದುರಗಣ್ಣನವರ ಪರಶುರಾಮ ಇಮ್ಮಡಿ ವಿಜಯ ಕುಂಬಾರ,ಮಹೇಶ ಲಮಾಣಿ ಸಂತೋಷ ಲಮಾಣಿ ಪ್ರಕಾಶ ಬೆಂತೂರ, ಜಗದೀಶಗೌಡ ಪಾಟೀಲ್ ಕಾರ್ಯಕರ್ತರು ಇದ್ದರು ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಪಟ್ಟರು ಪೊಲೀಸ್ ಬಂದೋ ಬಸ್ತನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋ ಬಸ್ತ ಮಾಡಲಾಗಿತ್ತು

Share News

About BigTv News

Check Also

ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಸಂಭ್ರಮಕ್ಕೆ ಸಜ್ಜು: ಸಂಗೀತ, ಡಿಜೆ ಡ್ಯಾನ್ಸ್ ಕಾರ್ಯಕ್ರಮ…

ರಂಗ ಪಂಚಮಿ ಅಂಗವಾಗಿ ಸ್ನೇಹಿತರಿಗಾಗಿ ವಿಶೇಷ ಡ್ಯಾನ್ಸ್ ಕಾರ್ಯಕ್ರಮ ಹುಬ್ಬಳ್ಳಿ: ರಂಗ ಪಂಚಮಿ ಹಬ್ಬದ ಅಂಗವಾಗಿ ಮಾರ್ಚ್ 6 ರಂದು …

Leave a Reply

Your email address will not be published. Required fields are marked *