Breaking News

ಕಲಬುರಗಿಯಲ್ಲಿ ಆ.5ರಂದು ಗೃಹಜ್ಯೋತಿ ಉದ್ಘಾಟನೆ: ಕೆ.ಜೆ.ಜಾರ್ಜ್!

ಬೆಂಗಳೂರು: ಆ.5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಉದ್ಘಾಟನಾ ಸಮಾರಂಭ ಸಂಬಂಧ ಬೆಂಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಗೃಹಜ್ಯೋತಿ ಯೋಜನೆ ಲಾಂಚ್ ಕಾರ್ಯಕ್ರಮ ನಿಗದಿಯಾಗಿದ್ದು, ಈ ಕಾರ್ಯಕ್ರಮ ಕಲಬುರಗಿಯಲ್ಲಿ ನಡೆಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

́ಗೃಹಜ್ಯೋತಿ’ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಉದ್ಘಾಟನಾ ಕಾರ್ಯಕ್ರಮದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ತಾರೆ. ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 200 ಯೂನಿಟ್​ಯೊಳಗೆ ವಿದ್ಯುತ್​ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್​ ನೀಡಲಾಗುತ್ತೆ. 200 ಯೂನಿಟ್​ನಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಸ್ಟ್ ಆಗಲಿದೆ ಎಂದರು.

ಸಿಎಂ ಸಿದ್ದರಾಮಯ್ಯ 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಹೇಳಿದ್ದಾರೆ. ಜುಲೈ ತಿಂಗಳ ಗೃಹಜ್ಯೋತಿ ಬಿಲ್ ಕೊಡಲು ಶುರು ಮಾಡಿದ್ದೇವೆ. 1.43 ಕೋಟಿ ಗೃಹಜ್ಯೋತಿ ನೋಂದಣಿಯಾಗಿದೆ. ಆಗಸ್ಟ್ 5ರಂದು ಲಾಂಚ್ ಕಾರ್ಯಕ್ರಮ ನಡೆಯುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಗೃಹಜ್ಯೋತಿ ಲಾಂಚ್ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಒಳಗೊಂಡಂತೆ ಒಟ್ಟು 1.43 ಕೋಟಿ ಮನೆಗಳಿಗೆ ಮೊದಲ ತಿಂಗಳ ಗೃಹಜ್ಯೋತಿ ನೀಡಲಾಗಿದೆ. 200 ಯೂನಿಟ್ ದಾಟಿದರೆ ಸಂಪೂರ್ಣ ಬಿಲ್ ಕಟ್ಟಬೇಕು. ಸರಾಸರಿ ಬಿಲ್‌ಗಿಂತ 10%ಗೂ ಹೆಚ್ಚು ಬಳಕೆಯಾದರೂ ಪೂರ್ತಿ ಬಿಲ್ ಕಟ್ಟಬೇಕು. ಎಷ್ಟು ಬಿಲ್ ಇದ್ದರೂ ಇಂಧನ ಇಲಾಖೆಗೆ ಸಬ್ಸಿಡಿ ಮೂಲಕ ಸರ್ಕಾರ ಹಣ ಪಾವತಿ ಮಾಡುತ್ತದೆ.

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *