ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯ ಅವರಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಸಿದ್ದರು ಈಗ ರಾಹುಲ್ ಗಾಂಧಿ ಪರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.
ಇವರ ಪರ ಹುಬ್ಬಳ್ಳಿಯ ಕಾಂಗ್ರೆಸ್ ನಾಯಕರಗಳು ರಾಹುಲ್ ಗಾಂಧಿ ಅವರ ಪರ ಖುಷಿ ಹಂಚಿಕೊಳ್ಳಲು ತಾರಾತುರಿಯಲ್ಲಿ ಪೋಸ್ಟರಗಳಲ್ಲಿ ಕಾಂಗ್ರೇಸ್ ಚಿಹ್ನೆಯನ್ನು ಬದಲಿಸಿ ಬಿಟ್ಟಿದ್ದಾರೆ. ತಮ್ಮ ಪಕ್ಷದ ಚಿಹ್ನೆಗಳನ್ನು ಸರಿಯಾಗಿ ಜವಾಬ್ಧಾರಿಯುತವಾಗಿ ನೋಡಿಕೊಳ್ಳಲು ಆಗದ ಕಾಂಗ್ರೆಸ್ ನಾಯಕರು ಇನ್ನು ರಾಜ್ಯವನ್ನು ಹೇಗೆ ನೋಡಿಕೊಳ್ಳುತ್ತಾರೆ..? ಕಾಂಗ್ರೆಸ್ ನಾಯಕರು
ವಿಜಯೋತ್ಸವ ಆಚರಿಸುವ ವೇಳೆ ಪೋಸ್ಟರ್ ಗಳಲ್ಲಿ ತಮ್ಮ ಪಕ್ಷದ ಚಿಹ್ನೆಯನ್ನು ಬಲ ಬಿಟ್ಟು ಎಡ ಎಂದು ತೋರಿಸಿದ್ದಾರೆ.
ಹುಬ್ಬಳ್ಳಿ -ಧಾರವಾಡ ಕಾಂಗ್ರೆಸ್ ನಾಯಕರುಗಳು ಇನ್ನು ನಮ್ಮ ಜಿಲ್ಲೆಗಳನ್ನ ಹೇಗೆ ನೋಡಿಕೊಳ್ಳುತ್ತಾರೋ..? ಕಾದು ನೋಡಬೇಕು. ಈ ನಾಯಕರುಗಳಿಗೆ ರಾಜ್ಯದ ನಾಯಕರುಗಳು ಸರಿಯಾಗಿ ಯೋಚನೆ ಮಾಡಿ ಜವಾಬ್ಧಾರಿ ಕೊಡಬೇಕು ಎಂದು ವಿನಂತಿ…
bigtvnews | Hubli Dharwad News | Kannada News | Karnataka News Hubli News | News In Hubli | Local news

