Breaking News

ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ:ಕುಮಾರಸ್ವಾಮಿ

ಬೆಂಗಳೂರು: ದುಡ್ಡಿಲ್ಲ ದುಡ್ಡಿಲ್ಲ ಅಂತಿರಾ ಯಾಕೆ ದುಡ್ಡಿಲ್ಲ. ಟ್ಯಾಕ್ಸ್ ಸಾಕಷ್ಟು ವಸೂಲಿ ಆಗಿದೆ. ಅಷ್ಟು ಹಣ ಇದ್ದರೂ ದುಡ್ಡಿಲ್ಲ ದುಡ್ಡಿಲ್ಲ ಅಂತಿರಾ. ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಭಿನ್ನ ರೀತಿಯಲ್ಲಿ ಗೃಹಜ್ಯೋತಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ!

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಏನೂ ಸಲಹೆ ಕೊಡುತ್ತಿದ್ದೆ ಹೇಳಿ ಪರಮೇಶ್ವರ. ಬಿಡಿಎ ,ಪೊಲೀಸ್, ಅಧಿಕಾರಿಗಳ ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ. ಏನೆಲ್ಲ ಆಯ್ತು ಅಂತ ನನಗೆ ಗೊತ್ತಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ಹೇಳಿದರು.

ನಾನು ಕೆಲವು ವಿಚಾರ ಪ್ರಸ್ತಾಪ ಮಾಡೋದು ಹುಡುಗಾಟಕ್ಕೆ ಅಲ್ಲ. ನಾನು ಹಿಟ್ ಆ್ಯಂಡ್​ ರನ್ ಜಯಮಾನದ ವ್ಯಕ್ತಿ ನಾನಲ್ಲ. ಇದನ್ನು ಮುಖ್ಯಮಂತ್ರಿಗಳಿಗೆ ಹೇಳೋಕೆ ಬಯಸುತ್ತೇನೆ. ಹಿಟ್ ಆ್ಯಂಡ್​ ರನ್ ಇದ್ದರೇ ಅದು ಕಾಂಗ್ರೆಸ್. ಹಿಂದೆ ನೀವು ಸಾಕಷ್ಟು ಆರೋಪ ಮಾಡಿದ್ದೀರಿ. ಆದರೆ ಒಂದಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ? ನಿಮ್ಮದೆ ಸರ್ಕಾರ‌ ಇದೆ ದಾಖಲೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪ್ರಶ್ನಿಸಿದರು

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *