Breaking News

ಮೃತ ಬಾಲಕ ಅಂತ್ಯ ಸಂಸ್ಕಾರದ ವೇಳೆ ಎದ್ದು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ…

ಹುಬ್ಬಳ್ಳಿ: ಮೃತ ಬಾಲಕ ಅಂತ್ಯ ಸಂಸ್ಕಾರದ ವೇಳೆ ಎದ್ದು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪಅಂಟರತಾನಿ ಆಸ್ಪತ್ರೆಯಲ್ಲಿ ಬಾಲಕ ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ.ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ,ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು,ಬಾಲಕ ಚಿಕಿತ್ಸೆ ಸ್ಪಂದನೆ ಮಾಡುತ್ತಿರಲಿಲ್ಲ ಎಂದರು.

ನಾವು ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು, ಹೀಗಾಗಿ ಸ್ವಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಹೋಗಿದ್ದರು ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ ಎಂದು ಹೇಳಿದರು.

ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಬಾಲಕನನ್ನು ಮತ್ತೆ ಕರೆದುಕೊಂಡು ಬಂದರು ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೇವು ಆದರೆ ಅವರು ಬೇಡ ಅಂತ ಮತ್ತೆ ವಾಪಸು ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿರಿಲ್ಲ ಎಂದು ತಿಳಿಸಿದರು.ಸುಮ್ಮನೆ ಮದ್ಯೆ ಇರೋರು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಮಾತನಾಡಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *