ನವದೆಹಲಿ: ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ದೆಹಲಿ- ಪುಣೆ ವಿಸ್ತಾರಾ ವಿಮಾನಕ್ಕೆ ಇಲ್ಲಿನ ಜಿಎಂಆರ್ ಗ್ರೂಪ್ ನಡೆಸುತ್ತಿರುವ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಶೀಘ್ರದಲ್ಲೇ, ಭದ್ರತಾ ಏಜೆನ್ಸಿಗಳ ಸರಿಯಾದ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕವಾಗಿ ಇರಿಸಲಾಯಿತು. ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ(ಐಜಿಐ) ವಿಮಾನ ನಿಲ್ದಾಣದಲ್ಲಿ ಕಾಲ್ ಸೆಂಟರ್‌ಗೆ ಬಾಂಬ್ ಕರೆ ಬೆದರಿಕೆ ಬಂದ ನಂತರ ವಿಮಾನವನ್ನು ಖಾಲಿ ಮಾಡಲಾಗಿದೆ.
ಪ್ರಯಾಣಿಕರು ಬೆಳಗ್ಗೆ 8.30ಕ್ಕೆ ವಿಮಾನ ಹೊರಡಬೇಕಿತ್ತು. ಯುಕೆ-971 ವಿಮಾನವು ದೆಹಲಿಯಿಂದ ಪುಣೆಗೆ ಹೋಗ ಬೇಕಿತ್ತು. ಆದ್ರೆ ಗುರುಗ್ರಾಮ್‌ನಲ್ಲಿರುವ ಜಿಎಂಆರ್ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲ ಪ್ರಯಾಣಿಕರ ಲಗೇಜ್‌ಗಳನ್ನು ಡಿ-ಬೋರ್ಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಪ್ರಸ್ತುತ ಟರ್ಮಿನಲ್ ಕಟ್ಟಡದಲ್ಲಿದ್ದಾರೆ. ಅವರಿಗೆ ಉಪಾಹಾರವನ್ನು ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





