Breaking News

ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷ ಕಂಪ್ಲೀಟ್…

ಹೈದರಾಬಾದ್​: “ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ” ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷಗಳ ಹಿಂದೆ ಭಾರತ ಬಿ ತಂಡದಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಶ್ರಿಲಂಕಾದ ವಿರುದ್ಧ ಆಡಿದ್ದರು. ಅಂದು 19ರ ಪೋರ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದಾಗ ಅವರ ಬ್ಯಾಟಿಂಗ್​ ಶೈಲಿ ಮತ್ತು ಅವರ 19 ವರ್ಷದೊಳಗಿನವರ ಪಂದ್ಯದ ಆಟವನ್ನು ಕಂಡವರು ಭಾರತದ ಫ್ಯೂಚರ್​ನ ಸ್ಟಾರ್​ ಆಟಗಾರ ಎಂದಿದ್ದರು. ಇಂದು ಕ್ರಿಕೆಟ್​ ಜಗತ್ತಿನ ಸ್ಟಾರ್​ ಆಗಿ ಮಿನುಗುತ್ತಿದ್ದಾರೆ.

19 ವರ್ಷದೊಳಗಿನವರ ವಿಶ್ವಕಪ್​ ತಂಡದ ನಾಯಕರಾಗಿ ಭಾರತವನ್ನು ಚಾಂಪಿಯನ್​ ಪಟ್ಟಕ್ಕೆ ಏರಿಸಿದ್ದ ವಿರಾಟ್​ ಕೊಹ್ಲಿ ತಮ್ಮ ಬ್ಯಾಟಿಂಗ್​ನಿಂದ 2008ರ ಇದೇ ದಿನ ಶ್ರೀಲಂಕಾ ಪ್ರವಾಸದ ಬಿ ತಂಡಕ್ಕೆ ಆಯ್ಕೆ ಆಗಿ ಮೈದಾನದಲ್ಲಿ ಬ್ಯಾಟ್​​ ಹಿಡಿದು ನಿಂತಿದ್ದರು. ವಿರಾಟ್​ ತಮ್ಮ ಸಾಮರ್ಥ್ಯವನ್ನು 19 ವರ್ಷದೊಳಗಿನವರ ವಿಶ್ವಕಪ್​ನಲ್ಲೇ ತೋರಿದ್ದರು. ಆರು ಪಂದಗಳಲ್ಲಿ 47ರ ಸರಾಸರಿಯಲ್ಲಿ 235 ರನ್​ ಗಳಿಸಿದ್ದರು. ಅಂದು ಅವರ ಆಟ ಕಂಡ ಹಿರಿಯರು, ಭಾರತಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕಿದ್ದಾನೆ ಎಂದಿದ್ದರು. ಅದನ್ನು ವಿರಾಟ್​ ಸಾಬೀತು ಮಾಡಿದ್ದಾರೆ ಸಹ.

ವಿರಾಟ್ ಮತ್ತು ಡೆಲ್ಲಿ ಸಹ ಆಟಗಾರ ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ತೆರೆದರು ಮತ್ತು ಕೇವಲ 12 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ವೈಫಲ್ಯತೆ ಎದುರಿಸಿದರೂ ಕೊಹ್ಲಿ ಮೊದಲ ಸರಣಿಯ ಅಂತ್ಯದಲ್ಲಿ ಯೋಗ್ಯ ಪ್ರದರ್ಶನ ಬಂದಿತ್ತು. ಐದು ಪಂದ್ಯಗಳಲ್ಲಿ 31.80 ಸರಾಸರಿಯಲ್ಲಿ 159 ರನ್ ಗಳಿಸಿದನು, ಐದನೇ ಏಕದಿನದಲ್ಲಿ ಮೊದಲ ಅರ್ಧಶತಕವನ್ನು ಗಳಿಸಿದ್ದರು. ವರ್ಷದಿಂದ ವರ್ಷಕ್ಕೆ, ಕೊಹ್ಲಿ ಎಲ್ಲ ಸ್ವರೂಪಗಳಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ನ್ಯೂಜಿಲ್ಯಾಂಡ್​​ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಜೊತೆಗೆ ‘ಫ್ಯಾಬ್ ಫೋರ್’ ಬ್ಯಾಟಿಂಗ್ ಕ್ವಾರ್ಟೆಟ್‌ನ ಭಾಗವಾಗಿದ್ದಾರೆ.

Share News

About BigTv News

Check Also

ಪ್ರೀತಿಸಿ ಕೊಲೆ ಮಾಡಿದ ಪುರೋಹಿತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಇಬ್ಬರೂ ಕೆಲಕಾಲ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರು. ಆದರೆ, ಅಪ್ಸರ ಮದುವೆಯಾಗುವಂತೆ ಒತ್ತಾಯಿಸಿದಾಗ, ಸಾಯಿ ಕೃಷ್ಣ ಅವಳನ್ನು ಕೊಲೆ ಮಾಡಲು ಯೋಜನೆ …

Leave a Reply

Your email address will not be published. Required fields are marked *