Breaking News

ಪರೀಕ್ಷೆ ಮುಗಿದ 48 ಗಂಟೆಗಳ ಒಳಗೆ ಫಲಿತಾಂಶ ಪ್ರಕಟಿಸಿ ಶೈಕ್ಷಣಿಕ ದಾಖಲೆ ಸೃಷ್ಟಿ….

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಬಿಸಿಎ (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಪದವಿಯ 5 ಮತ್ತು 6ನೇ ಸೆಮಿಸ್ಟರ್​ಗಳ ಪರೀಕ್ಷೆ ಮುಗಿದ 48 ಗಂಟೆಗಳ ಒಳಗೆ ಫಲಿತಾಂಶ ಪ್ರಕಟಿಸಿ ಶೈಕ್ಷಣಿಕ ದಾಖಲೆ ಸೃಷ್ಟಿಸಿದೆ. ಶೀಘ್ರ ಮೌಲ್ಯಮಾಪನಕ್ಕೆ ಹೆಸರಾಗಿರುವ ಕುವೆಂಪು ವಿವಿಯು ಈ ಹಿಂದೆಯೂ ಶೀಘ್ರವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ನೆರವಾಗಿತ್ತು.

ಪ್ರಸ್ತುತ ನಾನ್ – ಎನ್​ಇಪಿ ಬ್ಯಾಚ್​ನ ಬಿಸಿಎ ಪದವಿಯ 5 ಮತ್ತು 6ನೇ ಸೆಮಿಸ್ಟರ್​ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ಮುಕ್ತಾಯಗೊಂಡ ಕೇವಲ 2 ದಿನಗಳ ಒಳಗಾಗಿ ಪ್ರಕಟಿಸಲಾಗಿದೆ. ಫಲಿತಾಂಶವು ವಿಶ್ವವಿದ್ಯಾಲಯದ ಪೋರ್ಟಲ್​ನಲ್ಲಿಯೂ ಲಭ್ಯವಿದೆ. ಜೊತೆಗೆ ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೂ ರವಾನಿಸಲಾಗಿದೆ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *