Breaking News

ಬೆಂಗಳೂರಿನಲ್ಲಿ ಕಂಬಳಕ್ಕೆ ದಿನಾಂಕ ಫಿಕ್ಸ್

ಬೆಂಗಳೂರು: ರಾಜ್ಯದ ಪ್ರಸಿದ್ದ ಜನಪದ ಕ್ರೀಡೆ ಅಂದ್ರೆ ಅದು ಕಂಬಳ.ಇದು ಒಂದು ಕ್ರೀಡೆ ಮಾತ್ರವಲ್ಲ ಕರಾವಳಿ ಜನರ ಸಂಸ್ಕೃತಿಯ ಪ್ರತೀಕ. ಇದುವರೆಗೆ ಕಂಬಳ‌ ಆಯೋಜನೆ ಆಗೋದನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಆದರೆ ಇದೀಗ ಉದ್ಯಾನನಗರಿ ಬೆಂಗಳೂರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗ್ತದೆ. ನವೆಂಬರ್ 25,26 ರಂದು ಬೆಂಗಳೂರಿನಲ್ಲಿ ಅದ್ದೂರಿ ಕಂಬಳಕ್ಕೆ ಪ್ಲಾನ್ ರೂಪಿಸಲಾಗಿದೆ..

ಜೋಡಿ ಕೋಣಗಳೊಂದಿಗೆ ನಡೆಯುವ ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳೆದು, ಪಳಗಿದ ಕೋಣಗಳನ್ನ ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಆಯೋಜನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಕಂಬಳವನ್ನ ರೈತಾಪಿ ಜನರು ಭತ್ತದ ಕೊಯಿಲಿನ ನಂತರದಲ್ಲಿ ಮನರಂಜನೆಗೋಸ್ಕರ ಏರ್ಪಡಿಸಲಾಗುತ್ತಿತ್ತು. ಆದ್ರೆ ಈ ವರ್ಷ ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ‌ ವಿಜೃಂಭನೆಯಿಂದ ಕಂಬಳ‌ ನಡೆಯುತ್ತಿದೆ…

ಸದ್ಯ ಈ‌ ಕಂಬಳವನ್ನ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್’ನಲ್ಲಿ ಆಯೋಜನೆ ಮಾಡಲು ಜಾಗ ಗುರುತಿಸಿದ್ದು,ನವೆಂಬರ್ 25,26 ರಂದು ನಡೆಸಲು ದಿನಾಂಕ ನಿಗದಿ ಮಾಡಲಿದೆ. ಕಂಬಳ ಎರಡು ದಿನ ನಡೆಯಲಿದ್ದು. 125 ಜೋಡಿ ಕೋಣಗಳು ಮತ್ತು ಮಾಲೀಕರು ಭಾಗವಹಿಸಲಿದ್ದಾರೆ. ನಗರದಲ್ಲಿ ಮೊದಲ ಬಾರಿಗೆ ನಡೆಯುವ ಕಂಬಳಕ್ಕೆ 8 ಲಕ್ಷಕ್ಕೂ ಜನರು ಬರುವ ನಿರೀಕ್ಷೆ ಇದೆ. ಬಾಲಿವುಡ್ ನಟಿ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಚೀಫ್ ಗೆಸ್ಟ್ ಆಗಿ ಬರುವ ಸಾಧ್ಯತೆ ಕೂಡ ಇದ್ದು, ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ.ಅರಮನೆ ಮೈದಾನದಲ್ಲಿ ನಡೆಯುವ ಕಂಬಳಕ್ಕೆ 145 ಮೀಟರ್ ಕಂಬಳ ಕೆರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 15 ಸಾವಿರ ಜನರಿಗೆ ಗ್ಯಾಲರಿಯಲ್ಲಿ ಕುಳಿತು ನೋಡಲು ವ್ಯವಸ್ಥೆ ಮಾಡಲಾಗ್ತದೆ. 2 ಸಾವಿರ ವಿವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ನಗರದಲ್ಲಿ ನಡೆಯುವ ಕಂಬಳಕ್ಕೆ ಕಾರ್ಯಕ್ರಮಕ್ಕೆ 6 ಕೋಟಿ ಖರ್ಚು ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ಮಾಡ್ತಿದ್ದಾರೆ.

ಒಟ್ನಲ್ಲಿ, ಇಷ್ಟು ದಿನ ಕರಾವಳಿ ಭಾಗದಲ್ಲಿ ಕಂಬಳ ನಡೆಯುವುದನ್ನ ನೋಡುತ್ತಿದ್ವಿ.‌ ಇದೀಗಾ ನಮ್ಮ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದು ಬಹಳ ವಿಶೇಷವಾಗಿದ್ದು, ಆ ದಿನವನ್ನ ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ

Share News

About BigTv News

Check Also

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ : ಹುಟ್ಟುಹಬ್ಬ , ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು.!

  ರಾಜ್ಯದ ಪೊಲೀಸ್ ಸಿಬ್ಬಂದಿಗೆ ಭರ್ಜರಿ ಉಡುಗೊರೆ… ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವದ ದಿನ ರಜೆ.. ಪೊಲೀಸರಿಗೆ ರಜೆ ನೀಡಲು ಡಿಜಿ …

Leave a Reply

Your email address will not be published. Required fields are marked *