ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 5ರಂದು ಅಧಿಕೃತವಾಗಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಮುಖ್ಯ ಪಂದ್ಯಾವಳಿಗೂ ಮುನ್ನ ಸದ್ಯ ಎಲ್ಲಾ ಹತ್ತು ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ನಿರತವಾಗಿದ್ದು, ಅದೇ ರೀತಿ ಭಾರತ ಕ್ರಿಕೆಟ್ ತಂಡವು ತನ್ನ ಎರಡನೇ ಅಭ್ಯಾಸ ಪಂದ್ಯಕ್ಕಾಗಿ ತಿರುವನಂತಪುರಂ ತಲುಪಿದೆ. ಮಂಗಳವಾರ, ಅಕ್ಟೋಬರ್ 3ರಂದು ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡ ತನ್ನ ಕೊನೆಯ ಅಭ್ಯಾಸ ಪಂದ್ಯ ಆಡಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





