ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ, ಸರ್ಕಾರದ ವಿರುದ್ಧ ಗುಂಪು ಗೂಡಿ ಆಕ್ರೋಶ ಹೊರ ಹಾಕಲು ಅನುಮತಿ ಇಲ್ಲ. ಪ್ರತಿಭಟನೆ ಮಾಡಲೇ ಬೇಕು ಅಂತಿದ್ರೆ ಫ್ರೀಡಂ ಪಾರ್ಕ್‌ಗೆ ಬಂದು ಪ್ರತಿಭಟನೆ ಮಾಡಬೇಕು ಎನ್ನುವ ಆದೇಶ ಹೊರಬಿದ್ದಿತ್ತು. ಸದ್ಯ ಈ ವಿಚಾರ ಸಾಕಷ್ಟು ಸಂಘಟನೆಗಳ ಆಕ್ರೋಶಕ್ಕೆ ಕಾರಣ ಆಗಿದೆ. ಯಾವ ಜಾಗದಲ್ಲಿ ನಮಗೆ ಅನ್ಯಾಯ ಆಗಿದ್ಯೋ ಅಲ್ಲಿ ಧ್ವನಿ ಎತ್ತಬೇಕು. ಆದ್ರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬೇಕು ಅಂದ್ರೆ ಎಷ್ಟು ಸರಿ? ಅಂತಾ ಪ್ರಶ್ನೆ ಹಲವು ದಿನಗಳಿಂದ ಮಾಡುತ್ತಲೇ ಇದ್ದರು.
ಮುಂದುವರಿದ ಭಾಗವಾಗಿ ಇಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿದೆ. ಪ್ರತಿಭಟನೆ ಮಾಡಿದೆ. ಪ್ರತಿಭಟಿಸುವ ಹಕ್ಕಿಗಾಗಿ ಮೆರವಣಿಗೆ ಅನ್ನೋ ಘೋಷ ವಾಕ್ಯದ ಜೊತೆ ಪ್ರತಿಭಟಿಸಲಾಯಿತು.
ಹೋರಾಟವನಗನು ಫ್ರೀಡಂ ಪಾರ್ಕ್‌ಗೆ ಸೀಮಿತಮಾಡಿರುವ ಆದೇಶದ ವಿರುದ್ಧ ಪ್ರತಿಭಟನೆ ಮಾಡಿದ್ದು, ಜನಾಂದೋಲನ ಸಮಿತಿಯಿಂದ ಹೋರಾಟ ಮಾಡಲಾಗಿತ್ತು. ಮೌರ್ಯ ಸರ್ಕ್‌ಲ್‌ನಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಈ ವೇಳೆ ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್‌ಗೆ ಸೀಮಿತವಾಗಿರಿಸಿರುವ ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





