ಕಾವೇರಿ ಗಲಾಟೆಯ ಸಂದರ್ಭದಲ್ಲಿ ತಮಿಳು ನಟ ಸಿದ್ಧಾರ್ಥ (Siddharth), ತಮ್ಮ ಚಿಕ್ಕು ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕೆಲ ಕಾರ್ಯಕರ್ತರು ಸಿದ್ದಾರ್ಥ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿ, ತಡೆದಿದ್ದರು. ಈ ಕುರಿತು ಕರ್ನಾಟಕದಲ್ಲೇ ಪರ ವಿರೋಧದ ಮಾತುಗಳೂ ಕೇಳಿ ಬಂದಿದ್ದವು.
ಈ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ ಇದೀಗ ಪ್ರತಿಕ್ರಿಯೆಯನ್ನು (Response) ಕೊಟ್ಟಿದ್ದಾರೆ. ‘ನಾನು ನಟ. ಒಳ್ಳೆಯ ಸಿನಿಮಾ ಮಾಡಿದ್ದೇನೆ. ಸಾವಿರಾರು ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದಲ್ಲೂ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ನನಗೆ ಆ ನೆಲದಲ್ಲಿ ಹಾಗೆ ಆಗಬಾರದಿತ್ತು. ಕಾವೇರಿ ಹೋರಾಟಕ್ಕೂ ಸಿನಿಮಾಗೂ ಸಂಬಂಧ ಕಲ್ಪಿಸಬಾರದು’ ಎಂದಿದ್ದಾರೆ
ಸಿದ್ಧಾರ್ಥ ಅವರ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿರೋದ್ದಕ್ಕೆ ನಟ ಶಿವಣ್ಣ (Shivarajkumar) ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದರು. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥಗೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಶಿವಣ್ಣ ಹೇಳಿದ್ದರು. ಶಿವಣ್ಣ ಆಡಿದ ಈ ಮಾತಿಗೂ ಪರ ವಿರೋಧದ ಚರ್ಚೆ ಶುರುವಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





