Breaking News

ಜಾತಿ ಲೆಕ್ಕಾಚಾರದ ರಾಜಕಾರಣ ಸರಿಯಲ್ಲ ಎಚ್.ಕೆ. ಪಾಟೀಲ

ಧಾರವಾಡ ಸಾಕಷ್ಟು ಪ್ರಮಾಣದಲ್ಲಿ ಲಿಂಗಾಯತ ಮತಗಳು ನಮ್ಮ ಪಕ್ಷಕ್ಕೆ ಬಂದಿವೆ. ಜಾತಿ ಆಧಾರದ ಮೇಲೆ ಎಷ್ಟು ಸ್ಥಾನ ಬಂದಿದೆ ಎಂಬ ಚರ್ಚೆ ನಾವು ಮಾಡುವುದಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಮಾತನಾಡಿ, ಪ್ರಕಾಶ್ ರಾಥೋಡ್ ನಾನು ನೋಡಿಲ್ಲ ಅವರ ಹೇಳಿಕೆ ತಪ್ಪಾಗಿಯೂ ಬಂದಿರಬಹುದು. ಜಾತಿ ಲೆಕ್ಕಾಚಾರ ರಾಜಕಾರಣದಲ್ಲಿ ಸರಿಯಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ 15, 20, 25 ಸಾವಿರ ಸೇರಿದಂತೆ 70 ಸಾವಿರ ಲೀಡ್‌ನಿಂದ ಆಯ್ಕೆಯಾದ ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಿಂಗಾಯತ ಮತಗಳು ಬಂದಿವೆ. ಇಲ್ಲಿ ಪ್ರಮುಖವಾಗಿ ಆ ಜಾತಿ ಮತ ಬಂದಿಲ್ಲ, ಈ ಜಾತಿ ಮತ ಬಂದಿಲ್ಲ ಎನ್ನಬಾರದು ಎಂದರು.

ಹಿರಿಯ ಶಾಸಕ ಶಾಮನೂರ ಹೇಳಿಕೆ ವಿಚಾರದಲ್ಲಿ ಯಾವುದರಲ್ಲಿಯೂ ಸ್ಪಷ್ಟತೆ ಇಲ್ಲ, ಮಾಧ್ಯಮಗಳ ಮೂಲಕ ಗೊಂದಲ ಸೃಷ್ಟಿಸುವ ಪ್ರಯತ್ನ ಕೆಲವರು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 4 ಗ್ಯಾರಂಟಿ ಜಾರಿ ಮಾಡಿದೆ. ಹೀಗಾಗಿ, ಅನೇಕರು ಕಾಂಗ್ರೆಸ್‌ನತ್ತ ಧಾವಿಸುತ್ತಿದ್ದಾರೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.

ಜಾತಿವಾರು ವಿಷಯಗಳನ್ನು ರಾಜಕೀಯದಲ್ಲಿ ಮಾತನಾಡಲು ನಾನು ಅಪೇಕ್ಷೆ ಪಡುವುದಿಲ್ಲ, ನಾನು ಜಾತಿ ಆಧರಿಸಿ ರಾಜಕೀಯ ಹೆಜ್ಜೆ ಇಟ್ಟಿಲ್ಲ, ಅದು ಸರಿಯಾದ ರಾಜಕಾರಣವೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಜಾತಿ ರಾಜಕಾರಣ ಕುರಿತು ಮಾತನಾಡುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇದೆಲ್ಲವೂ ಮಾರಕವಾಗಿದೆ.

ಮದ್ಯದಂಗಡಿ ಕಡಿಮೆಯಾದಷ್ಟು ಒಳ್ಳೆಯದು, ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ಮಾಡುವ ಅವಶ್ಯಕತೆ ಇದೆ. ಸರ್ಕಾರಕ್ಕೆ ಆರ್ಥಿಕವಾಗಿ ಹೆಚ್ಚು ತೆರಿಗೆ ಬರುತ್ತಿರಬಹುದು, ಆದರೆ ಆರೋಗ್ಯಕರ ಸಮಾಜದ ಬಗ್ಗೆ ವಿಚಾರ ಮಾಡಬೇಕು ಎಂದರು.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *