Breaking News

ಅಡುಗೆ ವಿಚಾರಕ್ಕೆ ಇದೀಗ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಕಿತ್ತಾಡಿದ್ದಾರೆ…

ಬಿಗ್‌ಬಾಸ್ ಕನ್ನಡ ಸೀಸನ್- 10ರ ‘ವಾರದ ಕತೆ ಕಿಚ್ಚನ ಜೊತೆ’ ನೋಡೊಕೆ ಒಂದೇ ದಿನ ಬಾಕಿಯಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ತಿಕ್ಕಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ವಿನಯ್ ಗೌಡ ಹಲವರ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಸಂಗೀತಾ ಶೃಂಗೇರಿ ಬಳಿಕ ಇದೀಗ ಡ್ರೋನ್ ಪ್ರತಾಪ್ ಜೊತೆ ವಾಕ್ಸಮರ ನಡೆಸಿದ್ದಾರೆ.

5ನೇ ದಿನಕ್ಕೆ ಬಿಗ್‌ಬಾಸ್ ಶೋ ಕಾಲಿಟ್ಟಿದೆ. ಮೊದಲ ದಿನ ಶಾಸಕರಾದ ಪ್ರದೀಪ್ ಈಶ್ವರ್ ಮನೆಯೊಳಗೆ ಹೋಗಿದ್ದು ಭಾರೀ ಚರ್ಚೆಯಾಗಿತ್ತು. ಬಳಿಕ ಪ್ರಥಮ್ ಎಂಟ್ರಿ ಕೊಟ್ಟಿದ್ದರು. ಇನ್ನು ಮನೆಮಂದಿಯ ನಡುವೆ ಅನ್ಯೋನ್ಯತೆಗಿಂತ ಕಿರಿಕ್‌ಗಳೇ ಹೆಚ್ಚಾಗುತ್ತಿದೆ. ಪ್ರತಾಪ್, ಸಂಗೀತಾ ಹಾಗೂ ವಿನಯ್ ಕೊಂಚ ಹೆಚ್ಚೇ ಅಗ್ರೆಸ್ಸಿವ್ ಆಗ್ತಿದ್ದಾರೆ. ಇದರಿಂದ ಸಣ್ಣ ಸಣ್ಣ ಗಲಾಟೆಗಳು ಮನೆಯಲ್ಲಿ ನಡೀತಿದೆ.

ಅಡುಗೆ ವಿಚಾರಕ್ಕೆ ಇದೀಗ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಕಿತ್ತಾಡಿದ್ದಾರೆ. ಅದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಅಡುಗೆ ನೈರ್ಮಲ್ಯದ ಬಗ್ಗೆ ಮನೆಯಲ್ಲಿ ತಕರಾರು ಎದ್ದಿದೆ. ಅದನ್ನು ಡ್ರೋನ್ ಪ್ರತಾಪ್ ಆರಂಭಿಸಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳನ್ನು ಸಮರ್ಥರು ಹಾಗೂ ಅಸಮರ್ಥರು ಎಂದು ಇಬ್ಬಾಗ ಮಾಡಲಾಗಿದೆ. ಅಡುಗೆ, ಶುಚಿ, ಬಾತ್‌ರೂಮ್ ತೊಳೆಯುವುದು, ಹಾಸಿಗೆ ಸಿದ್ಧಗೊಳಿಸುವ ಕೆಲಸಗಳನ್ನು ಅಸಮರ್ಥರು ಮಾಡಬೇಕಿದೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *