Breaking News

ಕ್ರೈನ್ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.

ಪಾದಚಾರಿಗೆ ಕ್ರೈನ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದಲ್ಲಿ ಸಂಭವಿಸಿದೆ. ಅತ್ತಿಬೆಲೆಯ ಚಾಮರಾಜನಗರದ ನಿವಾಸಿ ಕೆ.ಎಂ.ಮಹೇಂದ್ರ(29) ಸಾವನಪ್ಪಿದ ದುರ್ದೈವಿ. ಕ್ರೈನ್ ಚಾಲಕ ಎತ್ತರದಲ್ಲಿದ್ದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹೇಂದ್ರ ಕಾಣದೆ ಅವಘಡ ಸಂಭವಿಸಿದೆ. ಅಪಘಾತದ ನಂತರ ಕ್ರೈನ್ ಚಾಲಕ ಪರಾರಿಯಾಗಿದ್ದಾನೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.

Share News

About admin

Check Also

ಮೈಸೂರುನಲ್ಲಿ ಸ್ಫೋಟಕಗಳು ಪತ್ತೆ

ಮೈಸೂರು: ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ವೊಂದರಲ್ಲಿ ನಡೆದಿದೆ. ಅಪರಿಚಿತರು ನೀಲಿ ಬಣ್ಣದ …

Leave a Reply

Your email address will not be published. Required fields are marked *