Breaking News

ರಾಜ್ ಕುಂದ್ರಾ ಪೋಸ್ಟ್ ಭಾರೀ ಸದ್ದು ಮಾಡ್ತಿದೆ…

ಪೋರ್ನೋಗ್ರಫಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಇದೀಗ ಶಾಕ್ ಕೊಟ್ಟಿದ್ದಾರೆ. ‘ಎಕ್ಸ್'(ಟ್ವಿಟ್ಟರ್) ಪ್ಲಾಟ್‌ಫಾರ್ಮ್‌ನಲ್ಲಿ ನಾನು, ಶಿಲ್ಪಾಶೆಟ್ಟಿ ದೂರಾಗಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ. ರಾಜಕುಂದ್ರಾ ಅಭಿನಯದ ‘UT 69’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪೋಸ್ಟ್ ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2021, ಜುಲೈನಲ್ಲಿ ಪೋರ್ನೋಗ್ರಫಿ ಪ್ರಕರಣದಲ್ಲಿ ರಾಜ್‌ಕುಂದ್ರಾ ಬಂಧನದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಂದಿನಿಂದ ಮಾಸ್ಕ್ ಹಾಕಿಕೊಂಡು ಮಾಧ್ಯಮಗಳ ಮುಂದೆ ಬರಲಾರಂಭಿಸಿದ್ದಾರೆ. ಆದರೆ, ರಾಜ್ ಕುಂದ್ರಾ ತಮ್ಮ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಬುಧವಾರ ಈ ಟ್ರೆಂಡ್‌ಗೆ ಅಂತ್ಯ ಹಾಡಿದ್ದಾರೆ. ಮಾಸ್ಕ್ ಧರಿಸದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ಇದೆಲ್ಲದರ ನಡುವೆ ರಾಜ್ ಕುಂದ್ರಾ ಜೀವನದ ವಿವಾದಾತ್ಮಕ ವಿಚಾರಗಳನ್ನು ಆಧರಿಸಿದ ಸಿನಿಮಾ’ಯುಟಿ 69′ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ರಾಜ್ ಜೈಲಿಗೆ ಹೋದಾಗಲೇ ಶಿಲ್ಪಾ ಡಿವೋರ್ಸ್ ಕೊಡುತ್ತಾರೆ ಎಂದು ಗುಸುಗುಸು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಪತಿ ಮಾಡಿದ ತಪ್ಪನ್ನು ಮನ್ನಿಸಿ ಶಿಲ್ಪಾ ಮುನ್ನಡೆದಿದ್ದರು. ಆದರೆ ಈಗ ರಾಜ್ ಕುಂದ್ರಾ ಪೋಸ್ಟ್ ಭಾರೀ ಸದ್ದು ಮಾಡ್ತಿದೆ

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *