Breaking News

ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಐವರು ಜೂಜುಕೋರರನ್ನು ಬಂಧಿಸಿದ ಕಾಗವಾಡ ಪೊಲೀಸರು

ಕಾಗವಾಡ: ಐನಾಪೂರ ಪಟ್ಟಣದ ಸರಹದ್ದಿಯ ಐನಾಪೂರ – ಕುಡಚಿ ರಸ್ತೆಯ ಬದಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ್ ಜೂಜಾಟ ಆಡುತ್ತಿದ್ದ ಗ್ಯಾಂಗ ಮೇಲೆ ಶನಿವಾರ ಸಂಜೆ ‌ಕಾಗವಾಡ ಪೊಲೀಸರು ದಾಳಿ ಐವರ ಬಂಧಿಸಿ 3,660 ರೂ ನಗದು ಹಾಗೂ 30,000 ರೂ ಮೂರು ಮೊಬೈಲಗಳು ಹಾಗೂ‌ 2.50,000 ರೂ ನಾಲ್ಕು ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂದಿ ಎಸ್ ಎಸ್ ನಂದಿವಾಲೆ ಅವರಿಗೆ ಪಕ್ಕಾ ಮಾಹಿತಿ ಬಂದ ಹಿನ್ನಲೆ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ‌ ಹಳ್ಳೂರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಘವೇಂದ್ರ ಖೋತ ಪ್ರೊಬೆಷನರಿ ಪಿಎಸ್‌ಐ ಶ್ರೀಕುಮಾರ‌ ದೇಸಾಯಿ ನೇತೃತ್ವದಲ್ಲಿ ತಂಡ ದಾಳಿ ನಡೆಸಿದ್ದಾರೆ. ಜೂಜಾಟ ಆಡುತ್ತಿದ್ದ ಎಂಟು ಜನರಲ್ಲಿ ಐದು ಜನ ಸಿಕ್ಕಿದ್ದು ಮೂರು‌ ಪರಾರಿಯಾಗಿದ್ದಾರೆ.‌ಐದು ಜನರ ಮೇಲೆ‌ 87 ಕೆ.ಪಿ‌ ಕಾಯ್ದೆ ಕಲಂ 112 BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಕೆ. ರಾಮರಾಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *