ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗದೇ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಮಳೆ,ಬೆಳೆಯಿಲ್ಲದೇ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಲ್ಲದೇ ಅಭಿವೃದ್ದಿ ಕೆಲಸಗಳೆಲ್ಲಾ ಮಂದಗತಿಯಲ್ಲಿ ಸಾಕುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ದಸರಾ ಹಬ್ಬಕ್ಕೆ ಸಂಪುಟದ ಸಚಿವರಿಗೆ ಭರ್ಜರಿ ಹೊಸ ಇನೋವಾ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
ರಾಜ್ಯದಲ್ಲಿ ಉತ್ತರ ಮಳೆಯಾಗದೇ, ಇತ್ತ ಗ್ಯಾರಂಟಿ ಯೋಜನೆಗಳಿಂದಾಗಿ ಎಲ್ಲಾ ಇಲಾಖೆಯಲ್ಲೂ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷಗಳು ಸರಣಿ ಆರೋಪಗಳನ್ನ ಮಾಡುತ್ತಿದ್ದು, ಭೀಕರ ಬರಗಾಲದ ನಡುವೆ ಸಚಿವರಿಗೆ ಹೊಸ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿಸಿ ಅದನ್ನು ವಿಧಾನಸೌಧದ ಮುಂದೆ ಸಾಲಾಗಿ ಇರಿಸಿರುವ ವಿಡಿಯೋ ವೈರಲ್ ಆಗಿದೆ.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜಕಾರಣಿಗಳಿಗೆ ಯಾವುದೇ ಬರವಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಬರಗಾಲದಲ್ಲೂ ರಾಜ್ಯ ಸರ್ಕಾರ ಸಂಪುಟದ 33 ಸಚಿವರಿಗೆ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿ ಮಾಡಿದೆ. 33 ಸಚಿವರಿಗಾಗಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





