ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ಬ್ಯಾಂಕ್ ರೂಪ ಕಿಸಾನ್ ಕಾರ್ಡ್ ನೀಡಿದೆ ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.1,41,266 ರುಪೆ ಕಿಸಾನ್ ಕಾರ್ಡುಗಳನ್ನು ರೈತರಿಗೆ ವಿತರಿಸಲಾಗಿದೆ 86,887 ರೂಪೇ ಡೆಬಿಟ್ ಕಾರ್ಡ್ ಗಳನ್ನು ಬ್ಯಾಂಕ್ ನ ಇತರ ಗ್ರಾಹಕರಿಗೆ ನೀಡಲಾಗಿದೆ ಬ್ಯಾಂಕಿಗೆ ಒಟ್ಟು 1086 ಸಂಘಗಳಿದ್ದು ಇವುಗಳ ಪಾಲು ಬಂಡವಾಳ 476.00. ಕೋಟಿ ರೂ ಆಗಿರುತ್ತದೆ. ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಸಾಲಗಳನ್ನು ಶೇ. 100 ರಷ್ಟು ಮರುಪಾವತಿ ಆಗಿದ್ದು ದಾಖಲೆ ನಿರ್ಮಿಸಿದೆ. ಈ ಸಾಧನೆಯನ್ನು ಬ್ಯಾಂಕ್ ಸತತ 30 ವರ್ಷಗಳಿಂದ ಮಾಡುತ್ತಾ ರಾಷ್ಟ್ರೀಯ ದಾಖಲೆ ಬರೆದಿದೆ. ಮಂಗಳೂರಿನಲ್ಲಿರುವ “ಎಸ್ಸಿಡಿಸಿಸಿ” ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಒಟ್ಟು 2300.74 ಕೋಟಿ ಹಾಗೂ ಕೃಷಿಯೇತರ ಕ್ಷೇತ್ರಕ್ಕೆ 5474.70 ಕೋಟಿ ಸಾಲ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

