ರಾಯಚೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳು ದಂಧೆಕೋರರು ಕೋಟಿ ಕೋಟಿ ರೂ ಸಂಪಾದಿಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ಸಹಜವಾಗಿ ಶಾಸಕರ ಹಿಂಬಾಲಕರು ಗುತ್ತಿಗೆದಾರರು ಅಥವಾ ಇನ್ನಿತರ ವ್ಯಕ್ತಿಗಳು ಮಾಫಿಯಾದಲ್ಲಿ ಪಾಲ್ಗೊಳ್ತಾರೆ. ಆದ್ರೆ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಹ ತಮ್ಮ ಕೆಲಸಕ್ಕೆ ವ್ಯಾಲೆಂಟರಿ ರಿಟೈರ್ಡ್ ಮೆಂಟ್ ಕೊಟ್ಟು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರಂತೆ. ಈ ಮಾತನ್ನ ಕೇವಲ ಯಾರೋ ಹೇಳಿದ ಮಾತಲ್ಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಈ ಬಗ್ಗೆ ಖುದ್ದು ಕೆಡಿಪಿ ಸಭೆಯಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಮುಂದೆಯೇ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಜಿಲ್ಲೆಯಲ್ಲಿ ಆಗುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಆದರೆ ಯಾವ ಪೊಲೀಸು ಯಾವ ಪೊಲೀಸ್ ಸ್ಟೇಷನ್ ಎಲ್ಲಿ ಮರಳು ಗಣಿಗಾರಿಕೆ ಮಾಡುತ್ತಾರೆ ಎಂಬ ಮಾಹಿತಿ ಮಾತ್ರ ದದ್ದಲ್ ತಿಳಿಸಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





