Breaking News

ರಾಮಾಪುರ ಆನೆ ಶಿಬಿರದಲ್ಲಿದ್ದ 36 ವರ್ಷದ ಗಂಡಾನೆ ಸಾವು..!

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ರಾಮಾಪುರ ಆನೆ ಶಿಬಿರದಲ್ಲಿದ್ದ 36 ವರ್ಷದ ಗಂಡಾನೆ ಮೃತ ಪಟ್ಟಿದೆ. ಆರೋಗ್ಯವಾಗಿಯೇ ಇದ್ದ ಆನೆ, ತರಬೇತಿ ನೀಡುತ್ತಿದ್ದ ಸಂದರ್ಭ ದಿಢೀರ್‌ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದೆ. ಈ ಆನೆಗೆ ಅಕ್ಕಿರಾಜ ಎಂಬ ಹೆಸರು ಇದೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ 2021ರಲ್ಲಿ ಸೆರೆ ಹಿಡಿದು ಬಂಡೀಪುರ ಸಮೀಪದ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು.

ಭಾರೀ ಗಾತ್ರದ ಆನೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಎಲಚೆಟ್ಟಿ ಗ್ರಾಮದ ಸುತ್ತಮುತ್ತ ಬೀಡು ಬಿಟ್ಟು ರೈತರ ಮನೆಗಳ ಮೇಲೆ ದಾಳಿ ಮಾಡುತ್ತಿತ್ತು , ಆನೆಯ ಉಪಟಳದಿಂದ ಬೇಸತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿ ಪ್ರತಿಭಟನೆಯನ್ನೂ ಕೂಡ ಮಾಡಿದ್ದರು

ಹಾಗಾಗಿ ಅರಣ್ಯ ಇಲಾಖೆಯು ಜೂನ್‌ ತಿಂಗಳಲ್ಲಿ ಸೆರೆಹಿಡಿದು ರಾಂಪುರ ಆನೆ ಶಿಬಿರದಲ್ಲಿ ಪಳಗಿಸಲಾಗುತ್ತಿತ್ತು. ಆದರೆ ಆರೋಗ್ಯವಾಗಿದ್ದ ಆನೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಹಾಗೂ ಹೃದಯಾಘಾತ ಮತ್ತು ಬಹುಅಂಗಾಂಗ ವೈಫಲ್ಯದಿಂದ ಆನೆ ಮೃತ ಪಟ್ಟಿದೆ ಎಂದು ತಿಳಿದುಬಂದಿದೆ

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *