ಹುಬ್ಬಳ್ಳಿ:ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ವ್ಯಕ್ತಿಯೊಬ್ಬನ ಒಂದು ಕೈ ಬಿಟ್ಟು ಉಳಿದೆಲ್ಲ ದೇಹವೆಲ್ಲ ಸಂಪೂರ್ಣವಾಗಿ ಛಿದ್ರ ಛಿದ್ರ ವಾದ ಘಟನೆ ಹುಬ್ಬಳ್ಳಿಯ ಧಾರವಾಡ ಬೈಪಾಸ್ ಬಳಿ ನಡೆದಿದೆ.
ಸುಮಾರು 50 ರಿಂದ 55 ವರ್ಷದ ವ್ಯಕ್ತಿ ಶಿಮ್ಲಾ ನಗರದ ಬಳಿ ಪ್ರತಿನಿತ್ಯ ವಾಯು ವಿಹಾರ ಮಾಡಲು ಈ ರಸ್ತೆಯಲ್ಲಿ ಬರುತ್ತಿದ್ದರಂತೆ,ಇಂದು ಬೆಳ್ಳಿಗ್ಗೆ ಕೂಡಾ ವಾಯು ವಿಹಾರ ಮಾಡಲು ಬಂದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಹಿಂಬದಿ ಬರುತ್ತಿದ್ದ ಹಲವು ವಾಹನಗಳು ಕೂಡಾ ದೇಹದ ಮೇಲೆ ಹರಿದ ಪರಿಣಾಮ ದೇಹವೆಲ್ಲ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ ಮೃತಪಟ್ಟ ವ್ಯಕ್ತಿಯ ಮಾಹಿತಿ ಸದ್ಯಕ್ಕೆ ಪೊಲೀಸರಿಗೆ ಲಭ್ಯವಾಗಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು. ಪ್ರಕರಣ ದಾಖಲಿಸಿಕೊಂಡು ಅಪಘಾತ ಮಾಡಿ ಪರಾರಿಯಾದ ವಾಹನದ ಪತ್ತೆಗೆ ಮುಂದಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





