Breaking News

ಗೃಹ ಜ್ಯೋತಿಗೆ ಉತ್ತಮ ಪ್ರತಿಕ್ರಿಯೆ- ಹೆಸ್ಕಾಂ ಇಲಾಖೆಯಲ್ಲಿ ದಾಖಲೆಯ ನೋಂದಣಿ

.ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆಗೆ ಅರ್ಹವಾದ 35.90 ಲಕ್ಷ ಕುಟುಂಬಗಳ ಪೈಕಿ 29.09 ಲಕ್ಷ ಕುಟುಂಬಗಳು (ಶೇ 81.03) ನೋಂದಣಿ ಮಾಡಿಕೊಂಡಿವೆ.

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸರ್ಕಾರವು ಜೂನ್‌ನಲ್ಲಿ ಆರಂಭಿಸಿತ್ತು. ಜುಲೈ ತಿಂಗಳಿನಿಂದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಹವಾದ ಒಟ್ಟು 35,90,841 ಗೃಹ ಬಳಕೆದಾರ (ಬಿಜೆ/ಕೆಜೆ ಸೇರಿಸಿ) ಕುಟುಂಬಗಳಿವೆ. ಇವುಗಳಲ್ಲಿ 29,09,824 ಕುಟುಂಬಗಳು ನೋಂದಣಿ ಮಾಡಿಕೊಂಡಿವೆ.

ಇವುಗಳಿಗೆ ಜುಲೈ ತಿಂಗಳ ವಿದ್ಯುತ್ ಶುಲ್ಕ ಶೂನ್ಯ ಬಂದಿದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಅಂತಿಮ ದಿನಾಂಕವಿಲ್ಲ. ಇನ್ನುಳಿದವರು ಕೂಡ ಹಂತಹಂತವಾಗಿ ನೋಂದಣಿ ಮಾಡಿಕೊಳ್ಳಬಹುದು.

ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿ 8.42 ಲಕ್ಷ ಗ್ರಾಹಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಅತಿ ಕಡಿಮೆ ನೋಂದಣಿಯು, ಗದಗ ಜಿಲ್ಲೆಯಲ್ಲಿ 2.39 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ವಿದ್ಯುತ್ ಉಚಿತವಾಗಿದ್ದರೂ ಬಿಲ್ ರಶೀದಿಯನ್ನು ಗ್ರಾಹಕರಿಗೆ ಎಂದಿನಂತೆ ನೀಡಲಾಗುತ್ತಿದೆ. ಇದರೊಳಗೆ ಅವರು ಬಳಸಿದ ವಿದ್ಯುತ್ ವಿವರ, ಶುಲ್ಕದ ವಿವರ ಹಾಗೂ ಬಾಕಿಯ ವಿವರ ನೀಡಲಾಗಿದೆ.

ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ ದಿನಾಂಕವನ್ನು ರಶೀದಿಯಲ್ಲಿ ನಮೂದು ಮಾಡಲಾಗಿದೆ. ಇದರ ಜೊತೆಗೆ, ಸರಾಸರಿ ವಿದ್ಯುತ್ ಯುನಿಟ್ ಬಳಕೆ ಹಾಗೂ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು ಯೋಜನೆಯ ಲಾಭದ ಮಿತಿಯನ್ನು ನಮೂದು ಮಾಡಲಾಗಿದೆ.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *