Breaking News

ವರ್ಗಾವಣೆ ಆದರೂ ಅದೇ ಠಾಣೆ..! ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ ಏನು..?

ವರ್ಗಾವಣೆ ಆದೇಶ ಕೇವಲ ಕಾಗದದಲ್ಲೇ ಮಾತ್ರನಾ..? ಅದೇ ಠಾಣೆಯಲ್ಲಿ ಮುಂದುವರಿದ ಪೊಲೀಸರು..!

ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆಯಲ್ಲಿ ಏನಾಗ್ತಿದೆ..? ವರ್ಗಾವಣೆ ಆದೇಶ ಕೇವಲ ಕಾಗದದ ಮೇಲಿನ ಆಟವಾ..? ಕೆಲವೇ ದಿನಗಳ ಹಿಂದೆ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಆದ ಪೊಲೀಸರು ಇನ್ನೂ ಅದೇ ಠಾಣೆಯಲ್ಲಿ ಮುಂದುವರಿತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ..! ಹಾಗಾದರೆ ವರ್ಗಾವಣೆ ಅಂದ್ರೆ ಹೆಸರು ಮಾತ್ರವಾ..? ಬೇರೆ ಠಾಣೆಗೆ ಪೋಸ್ಟಿಂಗ್ ಆದರೂ ಹಳೆಯ ಠಾಣೆಯಲ್ಲೇ ಕೆಲಸ ಮುಂದುವರಿದಿದ್ದರೆ, ಈ ಆದೇಶ ಯಾರಿಗಾಗಿ..? ನಿಯಮಗಳು ಸಾಮಾನ್ಯರಿಗೆ ಮಾತ್ರನಾ..?

ಎಂಬ ಪ್ರಶ್ನೆ ಗಟ್ಟಿಯಾಗಿ ಕೇಳಿಬರುತ್ತಿದೆ.. ಪೊಲೀಸ್ ಇಲಾಖೆಯೇ ನಿಯಮ ಪಾಲನೆ ಮಾಡಬೇಕಾದ ಜಾಗ. ಆದರೆ ವರ್ಗಾವಣೆ ಆದ ಮೇಲೂ ಅದೇ ಠಾಣೆಯಲ್ಲಿ ಮುಂದುವರಿದರೆ, ಆಡಳಿತದ ಮೇಲೆ ಪ್ರಶ್ನೆ ಮೂಡುವುದು ಸಹಜ ಅಂತ ಸಾರ್ವಜನಿಕರು ಮಾತಾಡ್ತಿದ್ದಾರೆ. ಇಷ್ಟಕ್ಕೂ ಆದೇಶ ಹೊರಡಿಸಿದ ಮೇಲೂ ಕೆಲವರು ಅದೇ ಠಾಣೆಯಲ್ಲಿ ಯಾಕೆ..? ಮೇಲಾಧಿಕಾರಿಗಳ ಮೌನಕ್ಕೆ ಕಾರಣ ಏನು..?

ವರ್ಗಾವಣೆ ಆದೇಶಕ್ಕೆ ನಿಜವಾಗಿಯೂ ಬೆಲೆ ಇದೆಯಾ ಅಥವಾ ಕೇವಲ ದಾಖಲೆಗಷ್ಟೇ ಸೀಮಿತವಾ..?

ವರ್ಗಾವಣೆ ಆದೇಶವಿದ್ದರೂ ರಿಲೀವ್ ಮಾಡದ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ..? ಅಥವಾ ನಿಯಮಗಳು ಕೇವಲ ಹೆಸರುಗಷ್ಟೇ ಸೀಮಿತವಾ..?

ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.ವರ್ಗಾವಣೆ ಆದರೂ ಅದೇ ಠಾಣೆ..! ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ ಏನು..?

Share News

About Shaikh BigTv

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *